ಬೆಂಗಳೂರು : ದೇಶದಲ್ಲಿ ನಿಜವಾದ ಅಲ್ಪಸಂಖ್ಯಾತ ಸಮುದಾಯ ಅಂದರೆ ಬ್ರಾಹ್ಮಣರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ದೇಶದಲ್ಲಿ ನಿಜವಾದ ಅಲ್ಪಸಂಖ್ಯಾತ ಸಮುದಾಯ ಅಂದರೆ ಬ್ರಾಹ್ಮಣರು, ಬ್ರಾಹ್ಮಣ ಸಮುದಾಯದವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕು. ಜನಸಂಖ್ಯೆಯಲ್ಲಿ ಬ್ರಾಹ್ಮಣರು ಕೇವಲ ಶೇಕಡಾ 2ರಿಂದ 3ರಷ್ಟಿದ್ದಾರೆ.ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಒಂದು ಜನಾಂಗದಷ್ಟಿರುವ ಮುಸ್ಲಿಮರು ಹೇಗೆ ಅಲ್ಪ ಸಂಖ್ಯಾತರಾಗುತ್ತಾರೆ. ದೇಶದ್ರೋಹಿ ಕೆಲಸ ಮತ್ತು ಪಾಕಿಸ್ತಾನದ ಪರ ಅವರು ಮಾತನಾಡುತ್ತಾರೆ. ಬಹಳ ಸೌಲಭ್ಯ ಬೇಕಿದ್ದರೆ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ಹೇಳಿದರು.
ಅಲ್ಪ ಸಂಖ್ಯಾತ ಹಾಗೂ 2ಎ ಎರಡೆರಡುವ ಮೀಸಲಾತಿ ಲಾಭವನ್ನು ಮುಸ್ಲೀಂ ಸಮುದಾಯದವರು ಪಡೆಯುತ್ತಿದ್ದಾರೆ. 2ಎ ಮೀಸಲಾತಿಯಿಂದ ತೆಗೆದುಹಾಕಲು ಎಲ್ಲ ತಯಾರಿ ನಡೆದಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆಯುತ್ತಿವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ʻದೀರ್ಘಕಾಲ & ಆರೋಗ್ಯʼಕರವಾಗಿ ಬದುಕಬೇಕೆ? ಈ 7 ಉಪಾಹಾರ ಟಿಪ್ಸ್ ಫಾಲೋ ಮಾಡಿ | breakfast ideas