ಶಿವಮೊಗ್ಗ : ತಂದೆಯ ಭ್ರಷ್ಟಾಚಾರ ಹಣದಿಂದ ರಾಘವೇಂದ್ರ ಎಂಪಿ ಆಗಿದ್ದಾರೆ. ನಮ್ಮ ತಂದೆಯವರು ಯಾವುದೇ ಇಂತಹ ದುಡ್ಡು ಮಾಡಿಲ್ಲ. ಚೋಟಾ ಸಹಿ ಮೂಲಕ ನಾನು ಯಾರನ್ನೂ ಜೈಲಿಗೆ ಕಳಿಸಿಲ್ಲ. ಪರೋಕ್ಷ ವಾಗಿ ಮಕ್ಕಳೇ ಬಿಎಸ್ವೈ ಅವರನ್ನು ಜೈಲಿಗೆ ಕಳುಹಿಸಿದ್ದು ಎಂದು ಸಚಿವ ಮಧು ಕಿಡಿಕಾರಿದರು.
ಇಂದು ಟಿಕೆಟ್ ಘೋಷಣೆ ಬಳಿಕ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಗೀತಾ ಅವರು ಆಗಮಿಸಿದ್ದು, ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ ಎಂಆರ್ಎಸ್ ವೃತ್ತದಿಂದ ಲಗಾನ್ ಕಲ್ಯಾಣ ಮಂದಿರದವರೆಗೆ ಬೃಹತ್ ಬೈಕ್ ರ್‍ಯಾಲಿ ನಡೆಸಿದರು. ಗೀತಾಗೆ ಪತಿ ಶಿವರಾಜ್ ಕುಮಾರ್ ಹಾಗೂ ಸಚಿವ ಮಧು ಬಂಗಾರಪ್ಪ ಅವರು ಸಾಥ್ ನೀಡಿದರು.
ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಅವರ ಪತ್ನಿ ಗೀತಾ ಶಿವ ರಾಜ್ಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಈ ಹಿನ್ನಲೆ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ನಮ್ಮ ತಂದೆಯ ಸೋಲಿನ ಸೇಡು ತಿರಿಸಿಕೊಳ್ಳಬೇಕಿದೆ.ಗೀತಕ್ಕ ಅವರನ್ನು ನಾವು ನಿಮ್ಮ ಮಡಿಲಿಗೆ ಹಾಕಿದ್ದೇವೆ. ಶಿವಮೊಗ್ಗ ಜಿಲ್ಲೆಯ ಧ್ವನಿಯಾಗಿ ಗೀತಾ ಕೆಲಸ ಮಾಡುತ್ತಾರೆ ಎಂದು ಗೀತಾ ಶಿವರಾಜ್ ಕುಮಾರ್ ಪರ ಮತಯಾಚನೆ ಮಾಡಿದರು.
ಗೀತಾ ಶಿವರಾಜ್ ಕುಮಾರ್ ಚುನಾವಣೆಯಲ್ಲಿ ಗೆಲ್ಲಬೇಕು. ಶಿವಮೊಗ್ಗ ಜಿಲ್ಲೆಯ ಧ್ವನಿ ಆಗಿ ಅವರು ಕೆಲಸ ಮಾಡುತ್ತಾರೆ. ಅವರನ್ನು ನಿಮ್ಮ ಮಡಲಿಗೆ ಹಾಕಿದ್ದೇವೆ. ಸಂಸದೆ ಆಗಿ ಗೆದ್ದು ಶಿವಮೊಗ್ಗ ಕ್ಷೇತ್ರದಲ್ಲಿ ಐದು ವರ್ಷ ಸೇವೆ ಸಲ್ಲಿಸುತ್ತಾರೆ. ಮಾಜಿ ಸಿಎಂ ಎಸ್ ಬಂಗಾರಪ್ಪ ಅವರ ಧ್ವನಿ ಆಗಿ ಗೀತಾ ಶಿವರಾಜ್ ಕುಮಾರ್ ಕೆಲಸ ಮಾಡುವ ವಿಶ್ವಾಸ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.