ರಾಯಚೂರು : ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಹಗರಣವನ್ನು ಬಯಲು ಮಾಡುತ್ತೇವೆ ಎಂದು ಜನಸಂಕಲ್ಪ ಯಾತ್ರೆಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸವಾಲ್ ಹಾಕಿದ್ದಾರೆ.
ರಾಯಚೂರು (Raichur) ತಾಲೂಕಿನ ಗಿಲ್ಲೆಸುಗೂರಿನಲ್ಲಿ ನಡೆದೆ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಯಡಿಯೂರಪ್ಪ ‘ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಹಗರಣವನ್ನು ಬಯಲು ಮಾಡುತ್ತೇವೆ, ತನಿಖೆ ಮಾಡಿಸಿ ನಿಮ್ಮನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲಿ ನಿಲ್ಲಿಸುತ್ತೇನೆ. ಹಗರಣವನ್ನೇ ಮಾಡದ ಪ್ರಧಾನಿ ಮೋದಿ ಬಗ್ಗೆ ಮಾತನಾಡುತ್ತೀರಾ..? 25 ಲಕ್ಷ ಮೌಲ್ಯದ ಹ್ಯೂಬ್ಲೆಟ್ ವಾಚ್ ಕೊಟ್ಟಿದ್ಯಾರು ಗೊತ್ತಿಲ್ವಾ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು. ಮತ್ತೆ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಾವೊಬ್ಬ ಗಂಡಸೂ ಮೀಸಲಾತಿ ಹೆಚ್ಚಿಸಲು ಮುಂದಾಗಿಲ್ಲ : ಶ್ರೀರಾಮುಲು
ಯಾವೊಬ್ಬ ಗಂಡಸೂ ಮೀಸಲಾತಿ ಹೆಚ್ಚಿಸಲು ಮುಂದಾಗಿಲ್ಲ, ಆದರೆ ಬೊಮ್ಮಾಯಿ ಮೀಸಲಾತಿ ಹೆಚ್ಚಿಸಿ ಅವರು ಏನೆಂದು ತೋರಿಸಿದ್ದಾರೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ರಾಯಚೂರು (Raichur) ತಾಲೂಕಿನ ಗಿಲ್ಲೆಸುಗೂರಿನಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಚಿವರು ‘ಬಿ.ಎಸ್ ಯಡಿಯೂರಪ್ಪ ವಾಲ್ಮೀಕಿ ಸಮುದಾಯಕ್ಕೆ ಸಾಕಷ್ಟು ನೆರವು ನೀಡಿದ್ದಾರೆ. ಯಡಿಯೂರಪ್ಪ ಅವರು ವಾಲ್ಮೀಕಿ ಮಹಿರ್ಷಿ ಜಯಂತಿ ಜಾರಿ ಮಾಡಿದ್ದಾರೆ. ಮೋದಿ-ಅಮೀತ್ ಶಾ ಜೋಡಿಯಂತೆ ನಮ್ಮಲ್ಲಿ ಬಿಎಸ್ ವೈ-ಬೊಮ್ಮಾಯಿ ಜೋಡಿಯಿದೆ. ಭೀಷ್ಮನ ಸ್ಥಾನದಲ್ಲಿ ಬಿಎಸ್ವೈ ಇದ್ದಾರೆ. 40 ವರ್ಷದಗಳಿಂದ ಹೋರಾಟ ಮಾಡಿದ್ದಾರೆ. ಎರಡು ಸ್ಥಾನದಿಂದ ಈಗ, ಬಿಜೆಪಿ ಅಧಿಕಾರ ವರೆಗೆ ಬಂದಿರುವುದಕ್ಕೆ ಬಿಎಸ್ ಯಡಿಯೂರಪ್ಪ ಕಾರಣ ಎಂದರು.
‘ಮೋದಿ-ಅಮಿತ್ ಶಾ’ ಜೋಡಿಯಂತೆ ನಮ್ಮಲ್ಲಿ ‘ಬಿಎಸ್ ವೈ-ಬೊಮ್ಮಾಯಿ’ ಜೋಡಿ : ಸಚಿವ ಶ್ರೀರಾಮುಲು