ಹೈದರಾಬಾದ್: ಆಂಧ್ರಪ್ರದೇಶದ ಪಲನಾಡು ಜಿಲ್ಲೆಯ ಖಾಸಗಿ ಕಾಲೇಜೊಂದರಲ್ಲಿ ನಡೆದ ಕ್ರೂರ ರ‍್ಯಾಗಿಂಗ್ ಪ್ರಕರಣವು ಇದೀಗ ಬೆಳಕಿಗೆ ಬಂದಿದೆ. ಇದು ಖಂಡನೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಹಿರಿಯ ವಿದ್ಯಾರ್ಥಿಗಳೊಂದು ಗುಂಪು ಕಿರಿಯ ವಿದ್ಯಾರ್ಥಿಗೆ ವಿದ್ಯುತ್ ಶಾಕ್ ನೀಡುತ್ತಾ, ಹಲ್ಲೆ ನಡೆಸುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ.
ಸದ್ಯ ತಿಳಿದು ಬಂದಿರುವಂತ ಮಾಹಿತಿಯ ಪ್ರಕಾರ, ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಲಾಗಿದೆ. ಈ ಕೃತ್ಯದಲ್ಲಿ ಹೊರಗಿನವರೂ ಪಾಲ್ಗೊಂಡಿದ್ದಾರೆ ಎನ್ನಲಾಗುತ್ತಿದೆ. ವೈರಲ್ ಆಗಿರುವಂತ ವಿಡಿಯೋದಲ್ಲಿ ಗುಂಪೊಂದು ಬಾಲಕನ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ಕಾಣಬಹುದಾಗಿದೆ.
ప్రభుత్వ జూనియర్ కాలేజీ లో ర్యాగింగ్ కలకలం.
కాలేజీలో చదివే విద్యార్థిని దారుణంగా కొడుతున్న తోటి విద్యార్థులు.
ఐదుగురు కలిసి ఒక విద్యార్థిని బీసీ హాస్టల్ కి తీసుకువెళ్లి కొట్టి.
కరెంట్ షాక్ పెట్టి సెల్ ఫోన్ లో చిత్రీకరిస్తూ చంపుతామని బెదిరింపులు. pic.twitter.com/VYP0S6PBQz
— 𝐍𝐚𝐯𝐞𝐞𝐧 𝐘𝐒𝐉 𝐕𝐢𝐳𝐚𝐠 (@YSJ2024) August 9, 2025
ಈ ಘಟನೆಯ ನಂತರ, ಸ್ಥಳೀಯರು ಮತ್ತು ವಿದ್ಯಾರ್ಥಿಗಳ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಘಟನೆಯ ನಂತ್ರ ಕಾಲೇಜು ನಿರ್ವಹಣೆ ಮತ್ತು ಭದ್ರತಾ ವ್ಯವಸ್ಥೆಯ ಮೇಲೆ ಹಲವು ಪ್ರಶ್ನೆಗಳು ಎದ್ದಿವೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ರ‍್ಯಾಗಿಂಗ್ ತಡೆಗೆ ಸಂಬಂಧಿಸಿದ ಕ್ರಮಗಳ ಕುರಿತ ಚರ್ಚೆ ಮತ್ತೆ ಜೋರಾಗಿದೆ. ಅಲ್ಲದೇ ಇಷ್ಟು ಕ್ರೂರವಾಗಿ ವಿದ್ಯುತ್ ಶಾಕ್ ನೀಡುವಷ್ಟು ರಾಗಿಂಗ್ ನಡೆದಿದ್ದು ಹೇಗೆ ಎಂಬ ಅಶ್ಚರ್ಯವನ್ನು ಹುಟ್ಟುಹಾಕಿದೆ. ಆ ಬಗ್ಗೆ ತನಿಖೆಯ ನಂತ್ರ ಸ್ಪಷ್ಟ ಮಾಹಿತಿ ಹೊರ ಬೀಳಲಿದೆ.
PM ಸೂರ್ಯ ಘರ್ ಯೋಜನೆಯಡಿ ಸಿಗುತ್ತೆ ‘200 ಯೂನಿಟ್’ ಉಚಿತ ವಿದ್ಯುತ್: ಈ ಕೂಡಲೇ ಅರ್ಜಿ ಸಲ್ಲಿಸಿ
BREAKING: ಮೋದಿಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಪ್ಲ್ಯಾನ್ ಮಾಡಿದ್ದ NSUI ಮುಖಂಡರಿಗೆ ಪೊಲೀಸರಿಂದ ಗೃಹ ಬಂಧನ