ಮೈಸೂರು: ಜಿಲ್ಲೆಯಲ್ಲಿ ಕುಡಿದ ಮತ್ತಿನಲ್ಲಿ ತಂದೆಯೊಬ್ಬ ತನ್ನ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಮಗಳನ್ನೇ ಬಲಿ ಪಡೆದ ಘಟನೆ ನಡೆದಿದೆ.
BIGG NEWS: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ವಾರ ಸರ್ವಪಕ್ಷ ಸಭೆ
13 ವರ್ಷದ ಕುಸುಮಾ ಮೃತ ಬಾಲಕಿ. ಉದ್ಬೂರು ತಾಲೂಕಿನ ಸ್ವಾಮಿನಾಯಕ್ ಮಗಳನ್ನೇ ಕೊಂದಿದ್ದ. ನವೆಂಬರ್ 17 ರಂದು ರಾತ್ರಿ ಕುಡಿದ ಬಂದು ಪತ್ನಿಯ ಜೊತೆ ಸ್ವಾಮಿನಾಯಕ್ ಜಗಳವಾಡುತ್ತಿದ್ದ. ಇದಕ್ಕೆ ಪತ್ನಿ ಗೀತಾ ಬೈದ್ ಬುದ್ದಿ ಹೇಳಿದ್ದಾಳೆ. ಇಷ್ಟಕ್ಕೆ ಮಕ್ಕಳಿಬ್ಬರ ಮೇಲೆ ಸ್ವಾಮಿನಾಯಕ್ ಸುತ್ತಿಗೆಯಿಂದ ಮನಬಂದಂತೆ ಹೊಡೆದು ಹಲ್ಲೆ ನಡೆಸಿ ಪರಾರಿಯಾಗಿದ್ದನು. ಕುಸುಮಾ ಹಾಗೂ ಧನುಶ್ರೀ ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.