ನವದೆಹಲಿ : ದೆಹಲಿಯಲ್ಲಿ ಪೊಲೀಸರ ಕಠಿಣ ಕ್ರಮಗಳ ಹೊರತಾಗಿಯೂ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ನಡುವೆ ಜಹಾಂಗೀರ್ಪುರ ಬಳಿ ತನ್ನ ತಂಗಿಯ ಪ್ರೇಮ ವಿವಾಹದ ಬಗ್ಗೆ ವ್ಯಂಗ್ಯ ಮಾಡುತ್ತಿದ್ದ ಸ್ನೇಹಿತನನ್ನು ಯುವತಿಯ ಸಹೋದರ ಚಿರಾಗ್, ರಾಹುಲ್ (30) ಎಂಬಾತನನ್ನು 30 ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ
BREAKING NEWS: ಇಂಗ್ಲೆಂಡ್ ಪ್ರಧಾನಿ ಹುದ್ದೆಗೆ ಇಂದು ಮತದಾನ: ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆ ಬಹುತೇಕ ಖಚಿತ
ಅಷ್ಟಕ್ಕೂ ನಡೆದಿದ್ದೇನು?
ಜಹಾಂಗೀರ್ಪುರದಲ್ಲಿ ವಾಸವಿದ್ದ ಚಿರಾಗ್ ತಂಗಿ ಕೆಲ ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ರಾಹುಲ್ ಕೂಡ ಇದರಲ್ಲಿ ಭಾಗಿಯಾಗಿದ್ದನು. ಆದರೆ ರಾಹುಲ್ ಆಗಾಗ್ಗೆ ತನ್ನ ತಂಗಿಯ ಪ್ರೇಮ ವಿವಾಹದ ಬಗ್ಗೆ ಹೀಯಾಳಿಸುತ್ತಿದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.
BREAKING NEWS: ಇಂಗ್ಲೆಂಡ್ ಪ್ರಧಾನಿ ಹುದ್ದೆಗೆ ಇಂದು ಮತದಾನ: ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆ ಬಹುತೇಕ ಖಚಿತ
ಬಳಿಕ ಅದು ವಿಕೋಪಕ್ಕೆ ತಿರುಗಿ ಈಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ಚಿರಾಗ್ 30 ಬಾರಿ ಚಾಕುವಿನಿಂದ ಇರಿದಿದ್ದ. ಅಷ್ಟರಲ್ಲಿ ಜಗಳ ಬಿಡಿಸಿದ ಸಹಚರರು ರಾಹುಲ್ನನ್ನು ಗಾಯಗೊಂಡ ಸ್ಥಿತಿಯಲ್ಲಿ ಬಿಜೆಆರ್ಎಂ ಆಸ್ಪತ್ರೆಗೆ ಕರೆದೊಯ್ದರು, ಅಷ್ಟರಲ್ಲಾಗಲೇ ರಾಹುಲ್ ಮೃತಪಟ್ಟಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿರುವ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ನಾಲ್ವರು ಅಪ್ರಾಪ್ತರನ್ನು ಬಂಧಿಸಿದ್ದಾರೆ.