ಹಾಸನ: ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕಾಗಿ ನಾದಿನಿ ಜೊತೆಗೆ ಸೇರಿ ಅಣ್ಣನನ್ನೇ ಕೊಲೆಗೈದಿರುವಂತ ಘಟನೆ ಹಾಸನದ ಮುಕುಂದೂರು ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಮುಕುಂದೂರು ಹೊಸಳ್ಳಿ ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ ತಮ್ಮನನ್ನೇ ಆತನ ಅಣ್ಣ ಹಾಗೂ ಪತ್ನಿ ಸೇರಿ ಕೊಲೆಗೈದಿರುವಂತ ಘಟನೆ ನಡೆದಿದೆ. ಆನಂದ್ (36) ಎಂಬಾತನನ್ನು ಅಣ್ಣ, ನಾದಿನಿ ಸೇರಿಕೊಂಡು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.
10 ವರ್ಷಗಳ ಹಿಂದೆ ಆನಂದ್ ಮದುವೆಯಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆತನ ದೊಡ್ಡಪ್ಪನ ಮಗ ಸೋಮಶೇಖರ್ ಎಂಬಾತನ ಪತ್ನಿ ಕಳೆದ ಮೂರು ವರ್ಷಗಳ ಹಿಂದೆ ಅನಾರೋಗ್ಯದ ಕಾರಣದಿಂದ ಸಾವನ್ನಪ್ಪಿದ್ದರು. ಹೀಗಾಗಿ ಆನಂದ್ ಮನೆಗೆ ಊಟ, ತಿಂಡಿಗೆ ಬರ್ತಾ ಇದ್ದನು. ಈ ಸಮಯದಲ್ಲೇ ಆನಂದ್ ತಮ್ಮನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬುದಾಗಿ ಆರೋಪಿಸಲಾಗಿದೆ.
ತಮ್ಮನ ಪತ್ನಿಯೊಂದಿಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಕಾರಣ, ತಮ್ಮನನ್ನೇ ಅಣ್ಣ ಹಾಗೂ ನಾದಿನಿ ಸೇರಿಕೊಂಡು ಕೊಲೆಗೈದು ಆತ್ಮಹತ್ಯೆಯ ನಾಟಕವಾಡಿದ್ದಾರೆ. ಆದರೇ ಪೊಲೀಸರು ಇವರ ನಡವಳಿಕೆಯ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರನ್ನು ಬಂಧಿಸಿ ಗೋರೂರು ಠಾಣೆಯ ಪೊಲೀಸರು ಜೈಲಿಗಟ್ಟಿದ್ದಾರೆ.
BIG NEWS: ರಾಜ್ಯದ ಜನತೆಗೆ ಮತ್ತೊಂದು ಶಾಕ್: ಶೀಘ್ರವೇ ‘ನಂದಿನಿ ಹಾಲಿನ ದರ’ ಹೆಚ್ಚಳ | Nandini Milk Price Hike
BREAKING : 11 ಮಂದಿ `DYSP’ (ಸಿವಿಲ್) ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ | DYSP Transfer