Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರೂಪಾಯಿ ಸಾರ್ವಕಾಲಿಕ ಕುಸಿತ : ಮೊದಲ ಬಾರಿ 1 ಡಾಲರ್ ಗೆ 95 ರೂಪಾಯಿ ತಲುಪಿದ ಮೌಲ್ಯ!

30/03/2026 3:28 PM

ನೀನಾ-ನಾನಾ ಅಂತಾ ಜಗಳ ಆಡೋ ಬದಲು, ಪ್ರಾಬ್ಲಮ್ ಸಾಲ್ವ್ ಮಾಡೋಕೆ ಇಲ್ಲಿದೆ ಸೂಪರ್ ಟ್ರಿಕ್ಸ್!

30/03/2026 3:27 PM

ತುಮಕೂರಲ್ಲಿ ಅತ್ತಿಗೆ ಜೊತೆ ಅಕ್ರಮ ಸಂಬಂಧ ಆರೋಪ : ಮದುವೆ ನಿಶ್ಚಯವಾಗಿದ್ದ ತಮ್ಮನ ಬರ್ಬರವಾಗಿ ಕೊಂದ ಅಣ್ಣ!

30/03/2026 3:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತುಮಕೂರಲ್ಲಿ ಅತ್ತಿಗೆ ಜೊತೆ ಅಕ್ರಮ ಸಂಬಂಧ ಆರೋಪ : ಮದುವೆ ನಿಶ್ಚಯವಾಗಿದ್ದ ತಮ್ಮನ ಬರ್ಬರವಾಗಿ ಕೊಂದ ಅಣ್ಣ!
KARNATAKA

ತುಮಕೂರಲ್ಲಿ ಅತ್ತಿಗೆ ಜೊತೆ ಅಕ್ರಮ ಸಂಬಂಧ ಆರೋಪ : ಮದುವೆ ನಿಶ್ಚಯವಾಗಿದ್ದ ತಮ್ಮನ ಬರ್ಬರವಾಗಿ ಕೊಂದ ಅಣ್ಣ!

By kannadanewsnow0530/03/2026 3:15 PM

ತುಮಕೂರು : ತುಮಕೂರಲ್ಲಿ ಬರ್ಬರವಾದ ಹತ್ಯೆ ನಡೆದಿದ್ದು, ಅತ್ತಿಗೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಅಣ್ಣನೊಬ್ಬ ಮದುವೆ ನಿಶ್ಚಯವಾಗಿದ್ದ ತಮ್ಮನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಬನಶಂಕರಿಯಲ್ಲಿ ನಡೆದಿದೆ.ಸ್ಟಾಲಿನ್​​ (29) ಮೃತ ಯುವಕನಾಗಿದ್ದು, ಆತನ ಸಹೋದರ ನವೀನ್​​ ಮತ್ತು ತಂದೆ ಜಾನ್​​ ಪಾಲ್​​ ಎಂಬುವವರೇ ಆರೋಪಿಗಳಾಗಿದ್ದಾರೆ. 

ಆರೋಪಿ ಜಾನ್​​ ಪಾಲ್​​ಗೆ ಇಬ್ಬರು ಗಂಡುಮಕ್ಕಳಿದ್ದು, ಆ ಪೈಕಿ ನವೀನ್​​ ಮೊದಲ ಮಗನಾದರೆ ಮೃತ ಸ್ಟಾಲಿನ್​​ ಎರಡನೇ ಪುತ್ರ. ನವೀನ್​​ಗೆ ಅದಾಗಲೇ ಮದುವೆಯಾಗಿದ್ದು, ಆತನ ಹೆಂಡತಿ ತುಂಬು ಗರ್ಭಿಣಿ ಕೂಡ ಹೌದು. ಈ ನಡುವೆ ಸ್ಟಾಲಿನ್​​ಗೆ ಜನಿಫರ್​​ ಎಂಬ ಯುವತಿಯ ಜೊತೆಗೆ ಮದುವೆ ನಿಶ್ಚಯವಾಗಿತ್ತು. ವಿವಾಹ ತಯಾರಿಯ ನಡುವೆ ತಾನು ಮದುವೆಯಾಗಬೇಕಿದ್ದ ಸ್ಟಾಲಿನ್​​ ಮತ್ತು ಆತನ ಅತ್ತಿಗೆ ಅಂದರೆ ನವೀನ್​ ಪತ್ನಿ ನಡುವೆ ಅಕ್ರಮ ಸಂಬಂಧ ಇರೋದಾಗಿ ಆಕೆ ಗಂಭೀರ ಆರೋಪ ಮಾಡಿದ್ದಳು.

ದೇ ವಿಚಾರವಾಗಿ ಸ್ಟಾಲಿನ್​​ ಮನೆಯಲ್ಲಿ ಒಂದು ವಾರದಿಂದ ಗಲಾಟೆ ನಡೆಯುತ್ತಿತ್ತು. ಇದು ವಿಕೋಪಕ್ಕೆ ಹೋಗಿ ಮಾರ್ಚ್​​ 22ರಂದು ಅಣ್ಣ ನವೀನ್​​ ತಮ್ಮ ಸ್ಟಾಲಿನ್​​ನ ಕೊಲೆ ಮಾಡಿದ್ದ. ಕಿರಿಯ ಮಗನ ಕೊಲೆ ಮಾಡಿದ್ದ ನವೀನ್​​ಗೆ ತಂದೆ ಜಾನ್​ ಪಾಲ್​​ ಕೂಡ ಬೆಂಬಲ ನೀಡಿದ್ದು, ಆರೋಪಿಗಳು ಘಟನೆ ಬಗ್ಗೆ ಕಥೆ ಕಟ್ಟಿದ್ದರು. ಬೈಕ್ ನಿಲ್ಲಿಸುವಾಗ ಕುಸಿದು ಬಿದ್ದು ಕಂಬಿ ತಾಗಿ ಹೊಟ್ಟೆಗೆ ಗಾಯವಾಗಿದೆ ಎಂದು ಹೇಳಿ ಸ್ಟಾಲಿನ್​​ನ ಆಸ್ಪತ್ರೆಗೆ ಸೇರಿಸಲಾಗಿತ್ತು.

ಆದರೆ ಐದು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಿದ್ದಗಂಗಾ ಆಸ್ಪತ್ರೆಯಲ್ಲಿ ಸ್ಟಾಲಿನ್​ ಮೃತಪಟ್ಟಿದ್ದಾರೆ. ಮೃತದೇಹ ಕುಟುಂಬಕ್ಕೆ ನೀಡುವ ಮುನ್ನ ಜಯನಗರ ಪೊಲೀಸರಿಗೆ ಆಸ್ಪತ್ರೆ ಮಾಹಿತಿ ಹಿನ್ನೆಲೆ ಪರಿಶೀಲಿಸಿದಾಗ ಚಾಕುವಿನಿಂದ ಇರಿದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ತಂದೆ ಜಾನ್​​ ಪಾಲ್​​ನ ಪೊಲೀಸರು ವಿಚಾರಣೆ ನಡೆಸಿದ್ದು, ಈತ ಆರಂಭದಲ್ಲಿ ಕತೆ ಹೇಳಿದ್ದ. ಆದರೆ ಬಳಿಕ ಅಸಲಿ ಸತ್ಯವನ್ನು ಬಿಚ್ಚಿಟ್ಟ ಹಿನ್ನೆಲೆ ಕೊಲೆ ರಹಸ್ಯ ಬಯಲಾಗಿದೆ.

Share. Facebook Twitter LinkedIn WhatsApp Email

Related Posts

ಹಾಸನದ ಬೆಟ್ಟದ ಭೈರವೇಶ್ವರ ಸನ್ನಿಧಿಯಲ್ಲಿ ಪ್ರಿ-ವೆಡ್ಡಿಂಗ್ ಶೂಟ್ ಅತಿರೇಕ: ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ

30/03/2026 2:00 PM1 Min Read

BREAKING : ಗ್ರಾಹಕರ ಜೇಬಿಗೆ ಕತ್ತರಿ : ಯುದ್ಧದ ಪರಿಣಾಮದಿಂದ ನಂದಿನಿ ಉತ್ಪನ್ನಗಳ ದರ ಏರಿಕೆಗೆ ‘KMF’ ಚಿಂತನೆ?

30/03/2026 1:37 PM1 Min Read

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯಾವಳಿ ವೇಳೆ ಕಳ್ಳರ ಕೈಚಳಕ: 50ಕ್ಕೂ ಹೆಚ್ಚು ಮೊಬೈಲ್‌ಗಳು ಮಾಯ!

30/03/2026 1:15 PM2 Mins Read
Recent News

BREAKING : ರೂಪಾಯಿ ಸಾರ್ವಕಾಲಿಕ ಕುಸಿತ : ಮೊದಲ ಬಾರಿ 1 ಡಾಲರ್ ಗೆ 95 ರೂಪಾಯಿ ತಲುಪಿದ ಮೌಲ್ಯ!

30/03/2026 3:28 PM

ನೀನಾ-ನಾನಾ ಅಂತಾ ಜಗಳ ಆಡೋ ಬದಲು, ಪ್ರಾಬ್ಲಮ್ ಸಾಲ್ವ್ ಮಾಡೋಕೆ ಇಲ್ಲಿದೆ ಸೂಪರ್ ಟ್ರಿಕ್ಸ್!

30/03/2026 3:27 PM

ತುಮಕೂರಲ್ಲಿ ಅತ್ತಿಗೆ ಜೊತೆ ಅಕ್ರಮ ಸಂಬಂಧ ಆರೋಪ : ಮದುವೆ ನಿಶ್ಚಯವಾಗಿದ್ದ ತಮ್ಮನ ಬರ್ಬರವಾಗಿ ಕೊಂದ ಅಣ್ಣ!

30/03/2026 3:15 PM

BREAKING : ಇತಿಹಾಸದಲ್ಲಿ ಮೊದಲ ಬಾರಿಗೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆಯ ಕುಸಿತ!

30/03/2026 3:13 PM
State News
KARNATAKA

ತುಮಕೂರಲ್ಲಿ ಅತ್ತಿಗೆ ಜೊತೆ ಅಕ್ರಮ ಸಂಬಂಧ ಆರೋಪ : ಮದುವೆ ನಿಶ್ಚಯವಾಗಿದ್ದ ತಮ್ಮನ ಬರ್ಬರವಾಗಿ ಕೊಂದ ಅಣ್ಣ!

By kannadanewsnow0530/03/2026 3:15 PM KARNATAKA 1 Min Read

ತುಮಕೂರು : ತುಮಕೂರಲ್ಲಿ ಬರ್ಬರವಾದ ಹತ್ಯೆ ನಡೆದಿದ್ದು, ಅತ್ತಿಗೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಅಣ್ಣನೊಬ್ಬ ಮದುವೆ…

ಹಾಸನದ ಬೆಟ್ಟದ ಭೈರವೇಶ್ವರ ಸನ್ನಿಧಿಯಲ್ಲಿ ಪ್ರಿ-ವೆಡ್ಡಿಂಗ್ ಶೂಟ್ ಅತಿರೇಕ: ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ

30/03/2026 2:00 PM

BREAKING : ಗ್ರಾಹಕರ ಜೇಬಿಗೆ ಕತ್ತರಿ : ಯುದ್ಧದ ಪರಿಣಾಮದಿಂದ ನಂದಿನಿ ಉತ್ಪನ್ನಗಳ ದರ ಏರಿಕೆಗೆ ‘KMF’ ಚಿಂತನೆ?

30/03/2026 1:37 PM

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯಾವಳಿ ವೇಳೆ ಕಳ್ಳರ ಕೈಚಳಕ: 50ಕ್ಕೂ ಹೆಚ್ಚು ಮೊಬೈಲ್‌ಗಳು ಮಾಯ!

30/03/2026 1:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.