ತಾನು ಕಿವುಡನಾಗುತ್ತಿದ್ದೇನೆ ಎಂದು ಬಹುತೇಕ ನಂಬಿದ್ದ ಒಬ್ಬ ಬ್ರಿಟಿಷ್ ವ್ಯಕ್ತಿ ಕೊನೆಗೂ ತಾನು ಮಾಡಿದ ತಪ್ಪು ಅರಿವಾಗಿ, ಇದೀಗ ತನ್ನ ಕಿವಿ ಎಲ್ಲಾ ಶಬ್ಧವನ್ನು ಕೇಳುವಂತೆ ಮಾಡಿಕೊಂಡಿದ್ದಾನೆ.
ಹೌದು, ಡಾರ್ಸೆಟ್ನ ವೇಮೌತ್ನ ನಿವಾಸಿಯಾದ ವ್ಯಾಲೇಸ್ ಲೀ ಎಂದು ಗುರುತಿಸಲಾದ ವ್ಯಕ್ತಿ ತಾನು ಕಿವುಡನಾದೆ ಎಂದು ಚಿಂತಿಸುತ್ತಿದ್ದ. ಇದೀಗ ಆತ ಮಾಡಿದ ತಪ್ಪಿನ ಅರಿವಾಗಿ ಈಗ ಮತ್ತೆ ಕಿವಿ ಕೇಳುವಂತೆ ಮಾಡಿಕೊಂಡಿದ್ದಾನೆ.
5 ವರ್ಷಗಳ ಹಿಂದೆ ವ್ಯಾಲೇಸ್ ಲೀ ಆಸ್ಟ್ರೇಲಿಯದಲ್ಲಿರುವ ತನ್ನ ಕುಟುಂಬವನ್ನು ಭೇಟಿ ಮಾಡಲು ವಿಮಾನದಲ್ಲಿ ಪ್ರಯಾಣ ಮಾಡುವಾಗ ಶಬ್ಧವನ್ನು ತಡೆಯುವುದಾಗಿ ತನ್ನ ಕಿವಿಗೆ ಇಯರ್ ಬಡ್ಸ್ನ ಹತ್ತಿ ಉಂಡೆಯನ್ನು ಇಟ್ಟು ನಿದ್ರಿಸಿದ್ದಾನೆ. ನಂತ್ರ ಇಯರ್ ಬಡ್ಸ್ನ ಒಂದು ತುಂಡು ಕಿವಿಯಲ್ಲೇ ಉಳಿದಿದೆ. ಕಾಲ ಕ್ರಮೇಣ ಕಿವಿಯಲ್ಲಿ ಇಯರ್ ಬಡ್ಸ್ನ ತುಂಡಿನ ಜೊತೆ ಬೇರೆ ಬೇರೆ ಕಲ್ಮಶವು ಅದರೊಂದಿಗೆ ಕಿವಿಯಲ್ಲೇ ಗಟ್ಟಿಯಾಗ ತೊಡಗಿದೆ. ಇದ್ರಿಂದ ಆತನಿಗೆ ಶಬ್ಧ ಕೇಳುವುದು ಕಮಡಿಮೆಯಾಗುತ್ತಾ ಬಂದಿದೆ. ಇದ್ರಿಂದ ತಾನು ಕಿವುಡನಾದೆ ಎಂದು ಆತ ಚಿಂತೆಗೀಡಾಗಿದ್ದ.
ನಂತ್ರ ವೈದ್ಯರನ್ನು ಭೇಟಿಯಾದಾಗ ವಿಷಯ ಬೆಳಕಿಗೆ ಬಂದಿದೆ. 5 ವರ್ಷಗಳ ಹಿಂದೆ ತಾನು ಮಾಡಿದ ತಪ್ಪು ನೆನಪಾಗಿ, ವೈದ್ಯರಿಗೆ ಎಲ್ಲಾ ವಿಷಯವನ್ನು ತಿಳಿಸಿದ್ದಾನೆ. ಕೊನೆಗೆ ಯಶಸ್ವಿಯಾಗಿ ಕಿವಿ ಕೇಳುವಂತಾಗಿದೆ.
BIG NEWS: ಗುಜರಾತ್ ಚುನಾವಣೆಯ ಎಎಪಿ ಅಭ್ಯರ್ಥಿ ಕುಟುಂಬ ಸಮೇತ ನಾಪತ್ತೆ: ಆತಂಕ ವ್ಯಕ್ತಪಡಿಸಿದ ಕೇಜ್ರಿವಾಲ್
G-20 Summit: ವಿಶ್ವ ನಾಯಕರೊಂದಿಗೆ ಮ್ಯಾಂಗ್ರೋವ್ ಕಾಡಿಗೆ ಭೇಟಿ ನೀಡಿ, ಸಸಿ ನೆಟ್ಟ ಪ್ರಧಾನಿ ಮೋದಿ
BIG NEWS: ಗುಜರಾತ್ ಚುನಾವಣೆಯ ಎಎಪಿ ಅಭ್ಯರ್ಥಿ ಕುಟುಂಬ ಸಮೇತ ನಾಪತ್ತೆ: ಆತಂಕ ವ್ಯಕ್ತಪಡಿಸಿದ ಕೇಜ್ರಿವಾಲ್