ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರೀ ವೆಡ್ಡಿಂಗ್ & ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಸದ್ಯದ ಟ್ರೆಂಡ್. ವಿಭಿನ್ನ ಕಾನ್ಸೆಪ್ಟ್ ಮೂಲಕ ಫೋಟೋಶೂಟ್ ಮಾಡ್ತಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಸಂಭ್ರಮ ಪಡುತ್ತಾರೆ. ವಿಶೇಷವಾಗಿ ಮೂಡಿ ಬಂದಿರುವ ಫೋಟೋಶೂಟ್ಗಳು ನೆಟ್ಟಿಗರ ಮೆಚ್ಚುಗೆಗೂ ಪಾತ್ರವಾಗುತ್ತದೆ. ಇದೀಗ ಇಂತದ್ದೇ ವೆಡ್ಡಿಂಗ್ ಫೋಟೋಶೂಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
BIGG NEWS: ವಿಜಯನಗರದಲ್ಲಿ ಘರ್ಜಿಸಲಿದೆ ಬುಲ್ಡೋಜರ್; 40ಕ್ಕೂ ಹೆಚ್ಚು ಮನೆಗಳಿಗೆ ನೋಟಿಸ್
ಮದುಮಗಳೊಬ್ಬಳು ಜಿಮ್ನಲ್ಲಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ. ಕಾಂಜೀವರಂ ಸೀರೆಯುಟ್ಟು, ಮದುವೆ ಹೆಣ್ಣಿನಂತೆ ಸಿಂಗರಿಸಿಕೊಂಡು ಜಿಮ್ನಲ್ಲಿ ಕಸರತ್ತು ನಡೆಸಿದ್ದಾಎತ್ತಿಕೊಂಡು ಫೋಟೋಗೆ ಫೋಸ್ ಕೊಟ್ಟಿದ್ದಾಳೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಟ್ವಿಟರ್ನಲ್ಲಿ ಈ ವೀಡಿಯೋವನ್ನು 17 ಸಾವಿರ ಜನರು ನೋಡಿದ್ದಾರೆ.
Pre-wedding shoot…👇
Aaj raaz khula himmat ka……. pic.twitter.com/1d9bJDVMqa
— Rupin Sharma (@rupin1992) November 19, 2021
ಜಿಮ್ನಲ್ಲಿ ಕಸರತ್ತು ಮಾಡಿಕೊಂಡು ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿರುವ ವಧುವಿಗೆ ನೆಟ್ಟಿಗರು ಮೆಚ್ಚುಗೆ ನೀಡಿದ್ದಾರೆ. ಈಕೆ ಮಹಿಳೆಯರ ಶಕ್ತಿಯನ್ನು ಮತ್ತು ಸೌಂದರ್ಯವನ್ನು ಪ್ರತಿನಿಧಿಸುತ್ತಿದ್ದಾಳೆ ಎಂದು ಹೇಳಿದ್ದಾರೆ.
BIGG NEWS: ವಿಜಯನಗರದಲ್ಲಿ ಘರ್ಜಿಸಲಿದೆ ಬುಲ್ಡೋಜರ್; 40ಕ್ಕೂ ಹೆಚ್ಚು ಮನೆಗಳಿಗೆ ನೋಟಿಸ್