ಬೆಂಗಳೂರು: ಪ್ರಾಪ್ತೆ ಜೊತೆ ಮದುವೆಯಾಗುವ ಉದ್ದೇಶದಿಂದ ಆಧಾರ್ ಕಾರ್ಡ್ನಲ್ಲಿ ಮಾಹಿತಿ ತಿರುಚಿದ ಆರೋಪದ ಮೇಲೆ ಮನು ಎಂಬ ಯುವಕನನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಘಟನೆ ಹಿನ್ನಲೆ: 2005ಯಲ್ಲಿ ಹುಟ್ಟಿದ ಯುವತಿಗೆ ಸಂಬಂಧಪಟ್ಟ ಮಾಹಿತಿಯನ್ನು ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಲು ತೆರಳಿದ್ದ ವೇಳೆಯಲ್ಲಿ ಜನ್ಮ ದಿನಾಂಕ ತಿದ್ದಿರುವ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಓ ನಡುವೆ ಸದ್ಯ ಯುವಕನ ವಿಚಾರಣೆ ನಡೆಯುತ್ತಿದ್ದು, ಆಧಾರ್ ಕಾರ್ಡ್ ತಿದ್ದಿದವರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.