ಬೆಂಗಳೂರು : ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದ್ದು ಯಾವುದೇ ಸರಕಾರಿ ಕೆಲಸ ಆಗಬೇಕೆಂದರೆ ಪಿಯೂನ್ ಹಿಡಿದುಕೊಂಡು, ದೊಡ್ಡ ದೊಡ್ಡ ಸರ್ಕಾರಿ ಅಧಿಕಾರಿಗಳವರೆಗೂ ಲಂಚ ನೀಡದೆ ಯಾವುದೇ ಕೆಲಸ ಆಗುವುದಿಲ್ಲ. ಇದಕ್ಕೆ ನಿರ್ದರ್ಶನ ಎಂಬಂತೆ ಬೆಂಗಳೂರಿನಲ್ಲಿ ಪುತ್ರಿ ಸಾವನ್ನಪ್ಪಿದ್ದು ಆಕೆಯ ಶವ ಸಾಗಾಟದಿಂದ ಹಿಡಿದು ಮರಣೋತ್ತರ ಪರೀಕ್ಷೆವರೆಗೂ ಅಧಿಕಾರಿಗಳು ಲಂಚ ತೆಗೆದುಕೊಂಡಿರುವ ಕುರಿತು ಮೃತ ಯುವತಿಯ ತಂದೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಪುತ್ರಿ ಸಾವಿನ ಸಂಕಟದ ಮಧ್ಯ ತಂದೆಗೆ ಲಂಚದ ಕಾಟ ತಪ್ಪಿಲ್ಲ. ಬೆಂಗಳೂರಿನ ಶಿವಕುಮಾರ್ ಗೆ ಲಂಚದ ಕರಾಳ ಅನುಭವ ಆಗಿದೆ. ಪುತ್ರಿಯ ಶವ ಸಾಗಾಟ ಅಂತ್ಯಕ್ರಿಯೆ ಮರಣೋತ್ತರ ಪರೀಕ್ಷೆಯಲ್ಲಿ ಲಂಚ ಸ್ವೀಕರಿಸಿದ್ದಾರೆ. ಪ್ರತಿಯೊಂದರಲ್ಲೂ ಲಂಚಾವತಾರ ಕಂಡು ಶಿವಕುಮಾರ್ ಶಾಕ್ ಆಗಿದ್ದಾರೆ. ಖಾಸಗಿ ಸಂಸ್ಥೆಯಲ್ಲಿ ಮಾಜಿ ಮುಖ್ಯ ಹಣಕಾಸು ಸಿಬ್ಬಂದಿಯಾಗಿ ಶಿವಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ.
ಕೋರಮಂಗಲ ಆಸ್ಪತ್ರೆಗೆ ಶವ ಸಾಗಿಸಲು ಅಂಬುಲೆನ್ಸ್ ಚಾಲಕನಿಗೆ 5,000 ನಿಗದಿ ಮಾಡಲಾಗಿದೆ. ನಿಗದಿತ ಹಣಕ್ಕಿಂತ ಹೆಚ್ಚು ಮಾಡಲಾಗಿದ್ದು ಮರಣೋತ್ತರ ಪರೀಕ್ಷೆಯ ವೇಳೆ ಹಣಕ್ಕಾಗಿ ಪೊಲೀಸರು ಒರಟು ವರ್ತನೆ ತೋರಿದ್ದಾರೆ. ಸೆಪ್ಟೆಂಬರ್ 18ರಂದು ಮೆದುಳಿನಲ್ಲಿ ರಕ್ತಸ್ರಾವದಿಂದ ಶಿವಕುಮಾರ್ ಪುತ್ರಿ ಅಕ್ಷಯಾ ಮೃತಪಟ್ಟಿದ್ದಳು. ಪುತ್ರಿ ಸಾವಿನ ಸುದ್ದಿ ತಿಳಿದು ಹೆತ್ತವರು ಮುಂಬೈನಿಂದ ಬಂದಿದ್ದಾರೆ.
ಕಸುವಿನ ಹಳ್ಳಿಯಿಂದ ಕೋರಮಂಗಲ ಆಸ್ಪತ್ರೆಗೆ ಶವ ಸಾಗಾಟ ಮಾಡಬೇಕಿತ್ತು, ಈ ವೇಳೆ ಶವ ಸಾಗಿಸಲು ಆಂಬುಲೆನ್ಸ್ ಚಾಲಕನಿಗೆ 5000 ನಿಗದಿ ಮಾಡಲಾಗಿದ್ದು, ಅಲ್ಲದೆ ಆಂಬುಲೆನ್ಸ್ ಚಾಲಕ ಹೆಚ್ಚುವರಿ ಆಗಿ 20 ಸಾವಿರ ವಸೂಲಿ ಮಾಡಿದ್ದಾನೆ. ಮರಣೋತ್ತರ ಪರೀಕ್ಷೆ ವೇಳೆ ಪೊಲೀಸ್ರು ಮತ್ತೆ ಲಂಚಕ್ಕಾಗಿ ಒರಟು ತೋರಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪಡೆಯಲು ಪೊಲೀಸರಿಗೆ 5000 ಲಂಚ ನೀಡಿದ್ದಾರೆ. ಅಲ್ಲದೇ ಮರಣ ಪ್ರಮಾಣ ಪತ್ರ ಪಡೆಯಲು ಕೂಡ ಲಂಚ ನೀಡಿದ್ದಾರೆ ಶಿವಕುಮಾರ್ ಇಂದ ಸರ್ಕಾರಿಗಳು 2000 ಲಂಚ ಪಡೆದಿದ್ದಾರೆ. ಮಗಳ ಸಾವಿನ ಶೋಕದಲ್ಲಿದೆ ತಂದೆಗೆ ಆದ ಲಂಚಾವತಾರದ ಬಗ್ಗೆ ಅವರು ಪೋಸ್ಟ್ ಮಾಡಿದ್ದಾರೆ.








