ದಾವಣಗೆರೆ: ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಲೊಕಾಯುಕ್ತ ಬಲೆಗೆ ಬಿದ್ದಿದ್ದಾರೆ.
BIGG NEWS: ಜನರಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ; ಮೈಸೂರು ಸೇರಿ 11 ನಗರಗಳಲ್ಲಿ ಜಿಯೋ ಟ್ರೂ 5G ಸೇವೆ
ಖಾಸಗಿ ಶಾಲೆಯೊಂದರ ಪರವಾನಿಗೆ ನೀಡಲು ಹಣ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಲೊಕಾಯುಕ್ತ ಅಧಿಕಾರಿಗಳ ಕೈ ಗೆ ಸಿಕ್ಕಿಬಿದ್ದಾರೆ. 15ಸಾವಿರ ರೂಪಾಯಿ ಲಂಚ ಪಡೆಯವಾಗ ಬಿಇಓ ಸಿದ್ದಪ್ಪ ಬಂಧಿಸಿದ್ದಾರೆ. ಹರಿಹರ ನಗರದ ವಿದ್ಯಾವಾಹಿನಿ ಶಾಲೆಯ ಮುಖ್ಯಸ್ಥರಾಗಿದ್ದ ರಘುನಾಥ್ ಎಂಬವರಿಂದ ಲಂಚ ಪಡೆಯುತ್ತಿದ್ದರು ಸಿದ್ದಪ್ಪ. ಸಿಬಿಎಸ್ ಸಿ ಶಾಲೆಯ ಪರವಾನಿಗೆ ನವೀಕರಣಕ್ಕೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಒಟ್ಟು 50 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ. ಈ ಹಿಂದೆ ಮುಂಗಡವಾಗಿ 10ಸಾವಿರ ರೂಪಾಯಿ ಪಡೆದುಕೊಂಡಿದ್ದರು.