ತಿರುವನಂತಪುರಂ: ತಿರುವನಂತಪುರಂ ಮತ್ತು ತ್ರಿಶೂರ್ನಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಎದೆಹಾಲು ಬ್ಯಾಂಕ್(Breast milk bank)ಗಳನ್ನು ಸ್ಥಾಪಿಸಲಾಗುವುದು ಎಂದು ಕೇರಳ ಆರೋಗ್ಯ ಇಲಾಖೆ ಶನಿವಾರ ಪ್ರಕಟಿಸಿದೆ. ಕೋಝಿಕ್ಕೋಡ್ ಎದೆಹಾಲು ಬ್ಯಾಂಕ್ನ ಯಶಸ್ವಿ ಕಾರ್ಯಾಚರಣೆಯ ಒಂದು ವರ್ಷದ ನಂತರ ಈ ಘೋಷಣೆ ಮಾಡಲಾಗಿದೆ.
ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಶನಿವಾರ ಕೋಝಿಕ್ಕೋಡ್ ಎದೆಹಾಲು ಬ್ಯಾಂಕ್ಗೆ ಭೇಟಿ ಮಾತನಾಡಿದ ಅವರು, ʻಈ ಬ್ಯಾಂಕ್ ಅನೇಕ ತಾಯಂದಿರು ಮತ್ತು ಮಕ್ಕಳಿಗೆ ದೊಡ್ಡ ಸಹಾಯ ಮಾಡಿದೆ. ಈ ಅತ್ಯಾಧುನಿಕ ಎದೆಹಾಲು ಬ್ಯಾಂಕ್ನ ಸಂಪೂರ್ಣ ಉದ್ದೇಶವು ಸ್ತನ್ಯಪಾನವನ್ನು ಉತ್ತೇಜಿಸುವುದು ಮತ್ತು ಮಕ್ಕಳು ಮತ್ತು ಹೊಸ ತಾಯಂದಿರಿಗೆ ಎಲ್ಲಾ ಬೆಂಬಲವನ್ನು ನೀಡುವುದು. ಕೋಝಿಕ್ಕೋಡ್ ಎದೆಹಾಲು ಬ್ಯಾಂಕ್ ಒಂದು ವರ್ಷದ ಹಿಂದೆ ಪ್ರಾರಂಭವಾದಾಗಿನಿಂದ ಇದುವರೆಗೆ 1,397 ತಾಯಂದಿರ ಮೂಲಕ 1,813 ಮಕ್ಕಳು ಈ ಸದುಪಯೋಗ ಪಡೆದುಕೊಂಡಿದ್ದಾರೆ. ಈ ಬ್ಯಾಂಕ್ ಇಲ್ಲಿಯವರೆಗೆ 1,26,225 ಮಿಲಿ ಎದೆಹಾಲು ಸಂಗ್ರಹಿಸಿದ್ದು, 1,16,315 ಮಿಲಿ ಹಾಲನ್ನು ವಿತರಿಸಲಾಗಿದೆʼ ಎಂದು ವೀಣಾ ಜಾರ್ಜ್ ತಿಳಿಸಿದರು.
ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಲಗತ್ತಿಸಲಾದ ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಎಲ್ಲಾ ಕಡ್ಡಾಯ ಪರೀಕ್ಷೆಗಳನ್ನು ನಡೆಸಿದ ನಂತರ ಈ ಬ್ಯಾಂಕ್ ಸಂಗ್ರಹಿಸಿದ ಹಾಲನ್ನು ಅಗತ್ಯವಿರುವ ಶಿಶುಗಳಿಗೆ ಒದಗಿಸುತ್ತದೆ. ಇದೇ ರೀತಿಯ ಬ್ಯಾಂಕ್ಗಳು ತಿರುವನಂತಪುರಂ ಮತ್ತು ತ್ರಿಶೂರ್ನಲ್ಲಿ ಶೀಘ್ರವೇ ತೆರೆಯಲಿವೆ ಎಂದು ಜಾರ್ಜ್ ಹೇಳಿದರು.
ನಿಮ್ಮ ಸ್ಮಾರ್ಟ್ ಫೋನ್ ಕಳೆದುಹೋಗಿದೆಯೇ? ಕೇಂದ್ರ ಸರ್ಕಾರದ ಈ ಆಪ್ ನಿಮಗೆ ಸಹಾಯ ಮಾಡಬಹುದು, ಇಲ್ಲಿದೆ ಮಾಹಿತಿ