ವಿಜಯಪುರ : ವಿಜಯಪುರ ನಗರದಲ್ಲಿ ದರೋಡೆಗೆ ಬಂದಿದ್ದವರಿಂದ ಮನೆ ಮಾಲೀಕನ ಹತ್ಯೆಗೆ ಯತ್ನಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.ವಿಜಯಪುರ ನಗರದ ಜೈನಾಪುರ ಲೇಔಟ್ ನಲ್ಲಿ ಒಂಟಿ ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿರುವ ಘಟನೆ ತಡರಾತ್ರಿ ನಡೆದಿದೆ.
ಹೌದು ನಿನ್ನೆ ರಾತ್ರಿ ಮನೆಗೆ ಹೋಗಿ ರಾಡ್, ತಲ್ವಾರ್ ಹಾಗೂ ಮಚ್ಚಿನಿಂದ ಬೆದರಿಸಿ ದರೋಡೆಗೆ ಯತ್ನಿಸಲಾಗಿದೆ ಮನೆಯಲ್ಲಿದ್ದ ದಂಪತಿ ಮೇಲೆ ಮಸುಕು ದಾರಿ ಗ್ಯಾಂಗ್ ಒಂದು ಹಲ್ಲೆ ನಡೆಸಿದೆ. ಮನೆಯಲ್ಲಿದ್ದ ಸಂತೋಷ್ಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದೆ.ಮನೆಯ ಮಾಲೀಕ ಸಂತೋಷ್ ಬೆನ್ನು ಹೊಟ್ಟೆ ಭಾಗಕ್ಕೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ.
ಅಲ್ಲದೆ ಸಂತೋಷ್ ಪತ್ನಿ ಭಾಗ್ಯಲಕ್ಷ್ಮಿ ಮೇಲೂ ಗ್ಯಾಂಗ್ ಇಟ್ಟಿಗೆಯಿಂದ ಹಲ್ಲೆ ನಡೆಸಿದೆ. ಈ ವೇಳೆ ಬಾಗ್ಯಲಕ್ಷ್ಮಿ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತು ಗ್ಯಾಂಗ್ ಮನೆಯಿಂದ ಪರಾರಿಯಾಗಿದೆ. ಗೂಡ್ಸ್ ವಾಹನದಲ್ಲಿ ಮಸುಕದಾರಿ ಗ್ಯಾಂಗ್ ನಿಂದ ಈ ಒಂದು ಕೃತ್ಯ ನಡೆದಿದೆ ಘಟನೆಯಿಂದ ಜೈನಪುರ ಲೇಔಟ್ ನಿವಾಸಿಗಳು ಸಹಜವಾಗಿ ಬೆಚ್ಚಿಬಿದ್ದಿದ್ದಾರೆ.
ಗಾಯಾಳು ಸಂತೋಷಕ್ಕೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದರೋಡೆ ಗ್ಯಾಂಗ್ ಪತ್ತೆಗೆ ವಿಶೇಷ ತಂಡಗಳ ರಚನೆ ಮಾಡಲಾಗಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದಾರೆ. ವಿಜಯಪುರದ ನಾಲ್ಕು ದಿಕ್ಕುಗಳಲ್ಲಿ ಪೊಲೀಸರು ಇದೀಗ ಸರ್ಪಗಾವಲು ಇದ್ದು ಗ್ಯಾಂಗ್ ಬಂಧನಕ್ಕೆ ಬಲೆ ಬೀಸಿದ್ದಾರೆ.