ಬೆಂಗಳೂರು : ನಟ ದರ್ಶನ್ ಮಾಜಿ ಪಿಎ ಆಗಿದ್ದ ಹಾಗೂ ಚಿತ್ರರಂಗದಲ್ಲಿ ಸಿನಿಮಾ ವಿತರಕರಾಗಿ ಗುರುತಿಸಿಕೊಂಡಿದ್ದ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ ವಿರುದ್ಧ ಇದೀಗ ಅರ್ಜುನ್ ಸರ್ಜಾ ಒಂದು ಕೋಟಿ ರೂಪಾಯಿ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
BREAKING : ಚಿಕ್ಕಮಗಳೂರಲ್ಲಿ ತುಂಡಾಗಿ ಬಿದ್ದಿದ್ದ ವೈರ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ರೈತನ ಸಾವು
ನಟ ದರ್ಶನ್ ಮಾಜಿ ಪಿಎ ಮಲ್ಲಿಕಾರ್ಜುನ ಬಗ್ಗೆ ಪತ್ರಿಕಾ ಪ್ರಕಾಟಣೆ ಹೊರಡಿಸಿದ್ದು, ಕಳೆದ ಏಳು ವರ್ಷಗಳಿಂದ ಮಲ್ಲಿಕಾರ್ಜುನ್ ನಾಪತ್ತೆಯಾಗಿದ್ದರು ಎನ್ನಲಾಗುತ್ತಿದೆ. ಚಿತ್ರರಂಗದಲ್ಲಿ ಮಲ್ಲಿಕಾರ್ಜುನ್ ವಿತರಕರಾಗಿ ಗುರುತಿಸಿಕೊಂಡಿದ್ದರು.ಅನೇಕ ಚಿತ್ರಗಳನ್ನು ದರ್ಶನ್ ಮಾಜಿ ಪಿಎ ಮಲ್ಲಿ ವಿತರಣೆ ಮಾಡಿದ್ದರು. ಶ್ರೀ ಕಾಲಕಾಲೇಶ್ವರ ಎಂಟರ್ಪ್ರೈಸಸ್ ಕಂಪನಿಯನ್ನು ಮಲ್ಲಿಕಾರ್ಜುನ ನಡೆಸುತ್ತಿದ್ದರು.
BREAKING: ರಾಮೇಶ್ವರಂ ಕೆಫೆ ಸ್ಪೋಟ ಕೇಸ್ : ಆರೋಪಿಗೂ ಖಾಕಿಗೂ ನಂಟು? ತನಿಖೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ
ಮಲ್ಲಿಕಾರ್ಜುನ್ ವಿರುದ್ಧ ಇದೀಗ ನಟ ಅರ್ಜುನ್ ಸರ್ಜಾ ಕೇಸ್ ದಾಖಲಿಸಿದ್ದಾರೆ. ಪ್ರೇಮ ಬರಹ ಚಿತ್ರ ವಿತರಣೆ ಹಣಕ್ಕಾಗಿ ಅರ್ಜುನ್ ಸರ್ಜಾ ಕೇಸ್ ದಾಖಲಿಸಿದ್ದಾರೆ. ಮಲ್ಲಿಕಾರ್ಜುನ ವಿರುದ್ಧ ಒಂದು ಕೋಟಿ ಚೆಕ್ ಬೌನ್ಸ್ ಕೇಸ್ ದಾಖಲಾಗಿದೆ ಕಳೆದ ಏಳು ವರ್ಷಗಳಿಂದ ಮಲ್ಲಿಕಾರ್ಜುನ್ ಯಾರಿಗೂ ಸಿಗದೆ ನಾಪತ್ತೆಯಾಗಿದ್ದರು ಎಂದು ಹೇಳಲಾಗುತ್ತಿದೆ.ಅಲ್ಲದೆ ಗಾಂಧಿನಗರದಲ್ಲಿ ಮಲ್ಲಿಕಾರ್ಜುನ್ 11 ಕೋಟಿ ವಂಚಿಸಿರುವ ಆರೋಪ ಕೇಳಿ ಬಂದಿದ್ದು ನಟ ದರ್ಶನ್ ಗೂ ಕೂಡ ಎರಡು ಕೋಟಿಯನ್ನು ವಂಚನೆ ಮಾಡಿದ್ದಾರೆ ಇದೀಗ ಮತ್ತೆ ನಟ ದರ್ಶನ್ ಮಾಜಿ ಪಿಎ ನಾಪತ್ತೆ ಕೇಸ್ ಸುದ್ದಿಯಲ್ಲಿದೆ.