ಬೆಳಗಾವಿ : ರಾಜ್ಯದಲ್ಲಿ ಇದೀಗ ವರುಣ ಅಬ್ಬರಿಸುತ್ತಿದ್ದು, ಈ ಒಂದು ವೇಳೆಯಲ್ಲಿ ಜನರು ತಮ್ಮ ಹುಚ್ಚುತನದಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಎಷ್ಟೇ ಜಾಗೃತಿ ಮೂಡಿಸಿದರು ಸಹ ಹುಚ್ಚಾಟ ಬಿಡುವುದಿಲ್ಲ. ಇದೀಗ ಬೆಳಗಾವಿಯಲ್ಲಿ ಯುವಕರಿಬ್ಬರೂ ರಸ್ತೆಯ ಮೇಲೆ ತೆರಳಿದ್ದು, ನಿಯಂತ್ರಣ ತಪ್ಪಿದ್ದರಿಂದ ಈ ವೇಳೆ ಯುವಕನೋರ್ವ ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಹೌದು ಬೆಳಗಾವಿ.ನಗರದ ಹೊರವಲಯದಲ್ಲಿ ಹರಿದು ಹೋಗಿರುವ ಮಾರ್ಕಂಡೇಯ ನದಿಯಲ್ಲಿ ಬೈಕ್ ಸವಾರ ಕೊಚ್ಚಿಕೊಂಡು ಹೋಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಅಲತಗಾ ಗ್ರಾಮದ ಓಂಕಾರ ಪಾಟೀಲ(23) ನಾಪತ್ತೆಯಾದ ಯುವಕ ಎಂದು ತಿಳಿದುಬಂದಿದೆ.
ಓಂಕಾರನ ಬೈಕ್ ಮೇಲೆ ಜ್ಯೋತಿನಾಥ ಪಾಟೀಲ ಜೊತೆಗೆ ಕಂಗ್ರಾಳಿಗೆ ಹೋಗುತ್ತಿದ್ದರು. ಈ ವೇಳೆ ಸವಾರನ ನಿಯಂತ್ರಣ ತಪ್ಪಿ ಮಾರ್ಕಂಡೇಯ ನದಿ ಪಕ್ಕದ ಕಾಲುವೆ ಮೇಲೆ ಬಿದ್ದಿದ್ದಾರೆ. ನದಿಯಲ್ಲಿ ಓಂಕಾರ ಕೊಚ್ಚಿಕೊಂಡು ಹೋಗಿದ್ದು, ಅದೃಷ್ಟವಶಾತ್ ಜ್ಯೋತಿನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಕಾಕತಿ ಠಾಣೆ ಪೊಲೀಸರ ಜೊತೆಗೆ ಡಿಸಿಪಿ ಪಿ.ವ್ಹಿ.ಸ್ನೇಹಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಎಸ್ಡಿಆರ್ಎಫ್ ತಂಡ ಕೂಡ ಆಗಮಿಸಿ ರಾತ್ರಿಯೇ ಕಾರ್ಯಾಚರಣೆ ನಡೆಸಿತು. ಆದರೂ, ಯುವಕನ ಸುಳಿವು ಸಿಗಲಿಲ್ಲ. ಇಂದು ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿ ಎಸ್ ಡಿ ಆರ್ ಎಫ್ ಇದೀಗ ಓಂಕಾರ್ ಪಾಟೀಲ್ ಶವ ಹೊರ ತೆಗೆದಿದೆ.