ಕಲಬುರಗಿ : ಇತ್ತೀಚಿಗೆ ಕಲಬುರ್ಗಿ ಜಿಲ್ಲೆಯು ಕೂಡ ಒಂದು ಅಪರಾಧ ಚಟುವಟಿಕೆಗಳ ತಾಣ ಆಗಿ ಬದಲಾಗುತ್ತಿರುವುದು ಆತಂಕಕಾರಿಯ ವಿಷಯವಾಗಿದೆ. ಇದೀಗ ಕಲ್ಬುರ್ಗಿ ಜಿಲ್ಲೆಯ ಅಫ್ಜಲ್ಪುರದಲ್ಲಿ ಯುವಕನನ್ನು ಹಾಡು ಹಗಲೇ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿದ್ದಾರೆ.
ಕೊಲೆಗೆ ಒಳಗಾದ ಯುವಕನನ್ನು ರಂಜಾನ್ ಮೆಹಬೂಬ್ (24) ಹತ್ಯೆಯಾದ ಯುವಕ ಎಂದು ಹೇಳಲಾಗುತ್ತಿದ್ದು, ಕೊಲೆಗೆ ಇದುವರೆಗೂ ನಿಖರವಾದಂತಹ ಕಾರಣ ತಿಳಿದುಬಂದಿಲ್ಲ. ಸದ್ಯ ಘಟನಾ ಸ್ಥಳಕ್ಕೆ ಇದೀಗ ಪೊಲೀಸರು ಭೇಟಿ ನೀಡಿದ್ದು, ಆಫ್ಜಲ್ಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.
ಅಲ್ಲದೆ ಇತ್ತೀಚಿಗೆ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಬಿಜೆಪಿ ಮುಖಂಡನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. ಅದೇ ರೀತಿಯಾಗಿ ಇದೇ ಅಫ್ಜಲ್ಪುರ ತಾಲೂಕಿನಲ್ಲಿ ಸಂಸದ ಉಮೇಶ್ ಜಾಧವ್ ಅವರ ಆಪ್ತ ಎನ್ನಲಾದ ಯುವಕನನ್ನು ಪಾರ್ಟಿ ಹೆಸರಲ್ಲಿ ಕರೆಸಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿದ್ದರು.