ಬೆಳಗಾವಿ : ಸ್ನೇಹಿತೆಯ ಮನೆಗೆ ಊಟಕ್ಕೆ ತೆರಳಿದ್ದ ಒಂದೇ ಒಂದು ಕಾರಣಕ್ಕೆ, ಯುವಕ ಮತ್ತು ಆತನ ಪ್ರಿಯತಮೆ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಪ್ರಿಯತಮೆಯ ಜೊತೆಗೆ ಬಂದಿದ್ದ ಮೂವರು ಯುವಕನ ಮೇಲೆ ಗುಂಡಿನ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಬೆಳಗಾವಿಯ ಆಂಜನೇಯ ನಗರದಲ್ಲಿ ನಡೆದಿದೆ.
ಹೌದು ಗುಂಡು ತಗುಲಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನನ್ನು ಪ್ರಣಿತ್ (31) ಎಂದು ತಿಳಿದುಬಂದಿದೆ. ಈತ ಬೆಳಗಾವಿ ನಗರದ ಟಿಳಕವಾಡಿಯ ದ್ವಾರಕಾನಗರದ ನಿವಾಸಿ ಎನ್ನಲಾಗಿದೆ. ನಿನ್ನೆ ಈತ ಸ್ನೇಹಿತೆ ಸ್ಮಿತಾ ಮನೆಗೆ ಊಟಕ್ಕೆ ಹೋಗಿದ್ದಾನೆ. ಇನ್ನೇನು ಊಟ ಮಾಡಬೇಕು ಅಂದುಕೊಳ್ಳುವಷ್ಟರಲ್ಲಿ ಪ್ರಣಿತ್ ಮಾಜಿ ಗರ್ಲ್ ಫ್ರೆಂಡ್ ಸ್ಮಿತಾಳ ಮನೆಗೆ ಬಂದಿದ್ದಾಳೆ.
ಸಹಜವಾಗಿ ತಾನು ಪ್ರೀತಿಸುವ ಹುಡುಗ ಬೇರೆ ಹೆಣ್ಣಿನೊಂದಿಗೆ ಕಂಡಾಗ ಯಾರಿಗೆ ಆಗಲಿ ಕೋಪ ಬರುತ್ತದೆ. ಇದೇ ರೀತಿ ಕೂಡ ಪ್ರಣಿತ್ ಗರ್ಲ್ ಫ್ರೆಂಡ್ ಗು ಆಗಿದ್ದು, ಗಂಡ ಸತ್ತ ಸ್ಮಿತಾ ಒಬ್ಬಳೆ ಇದ್ದು ಆಕೆ ಮನೆಗೆ ಪ್ರಣಿತ್ ಯಾಕೆ ಬಂದಾ ಎಂದು ಅನುಮಾನಗೊಂಡು ಪ್ರಣಿತ್ ಜೊತೆಗೆ ಜಗಳಕ್ಕಿಳಿದಿದ್ದಾಳೆ.ಈ ವೇಳೆ ಸ್ಮಿತಾ ಎಂಟ್ರಿಯಾಗಿ ಇಬ್ಬರ ನಡುವಿನ ಜಗಳ ಬಗೆ ಹರಿಸುವ ಕೆಲಸ ಮಾಡಿದ್ದಾಳೆ.
ಪುನೀತ್ ಗರ್ಲ್ ಫ್ರೆಂಡ್ ಜೊತೆಗೆ ಇನ್ನೂ ಮೂವರು ಬಂದಿದ್ದು, ಇವರ ಗಲಾಟೆಯ ನಡುವೆ ಅದರಲ್ಲಿ ಒಬ್ಬ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ.ಗುಂಡಿನ ದಾಳಿಯಿಂದ ಪ್ರಣಿತ್ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾನೆ. ಗುಂಡು ಹಣೆ ಭಾಗದಿಂದ ಕಿವಿ ಪಕ್ಕ ಹಾದುಗೋಗಿದೆ. ಕೂಡಲೇ ಆರೋಪಿಗಳು ಮತ್ತೊಂದು ಗುಂಡು ಹಾರಿಸಿದ್ದಾರೆ. ಈ ವೇಳೆ ಪ್ರಣಿತ್ ತೊಡೆಗೆ ಗುಂಡು ತಗಲಿದ್ದು ಆತ ಕುಡಿದು ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಕೂಡಲೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದ ಪ್ರಣಿತ್ನನ್ನು ಕೂಡಲೇ ಸ್ಮಿತಾ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಮಾಳಮಾರುತಿ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಗುಂಡಿನ ದಾಳಿ ವಿಚಾರ ಗೊತ್ತಾಗುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ಆಸ್ಪತ್ರೆಗೆ ಬಂದು ಹಲ್ಲೆಗೊಳಗಾದ ಪ್ರಣಿತ್ರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಪ್ರಣಿತ್ ಆರೋಗ್ಯ ವಿಚಾರಿಸಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.