ಬೆಳಗಾವಿ : ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ತಡೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿದರು ಸಹ ಇದುವರೆಗೂ ರಾಜ್ಯದ ಹಲವು ಕಡೆಗಳಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಮುಂದುವರಿಯುತ್ತಲೇ ಇದೆ ಇದೀಗ ಬೆಳಗಾವಿಯಲ್ಲಿ ಬಡ್ಡಿ ದಂಧೆಕೋರನೊಬ್ಬ ಯುವಕನೊಬ್ಬನನ್ನು ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ನೀಡಿರುವ ಘಟನೆ ವರದಿಯಾಗಿದೆ.
ಹೌದು ಬಡ್ಡಿ ಹಣಕ್ಕಾಗಿ ಯುವಕನನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಡಲಾಗಿದೆ. ಬೆಳಗಾವಿಯ ಸದಾಶಿವನಗರದ ನಿವಾಸಿ ವಿಶ್ವಜೀತ್ ಎನ್ನುವ ಯುವಕ ಕಿಡ್ನಾಪ್ ಆಗಿದ್ದಾನೆ. 2 ಲಕ್ಷ ಹಣವನ್ನು ವಿಶ್ವಜೀತ ಸಾಲದ ರೂಪದಲ್ಲಿ ಹಣ ಪಡೆದಿದ್ದ ಡ್ಯಾನಿ ಬೀಡಕರ್ ಎಂಬಾತನ ಬಳಿ 2 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದ. ಸಾಲದ ಅಸಲು ತೀರಿಸಿದ ಬಳಿಕವು ಬಡ್ಡಿ ಹಣಕ್ಕಾಗಿ ಡ್ಯಾನಿ ಕಿರುಕುಳ ನೀಡುತ್ತಿದ್ದ.
ಈ ವೇಳೆ ಟೀ ಕುಡಿದು ಬರೋಣ ಬಾ ಎಂದು ವಿಶ್ವಜೀತ್ ನನ್ನು ಕರೆದೋಯ್ದಿದ್ದಾನೆ. ಬಳಿಕ ಹಣ ಕೊಡುವವರೆಗೂ ಬಿಡಲ್ಲ ಎಂದು ಕೂಡಿಹಾಕಿ ಚಿತ್ರಹಿಂಸೆ ಕೊಟ್ಟಿದ್ದಾನೆ. ಸಂತಿಬಸ್ತವಾಡ ಗ್ರಾಮದ ಫಾರ್ಮ್ ಹೌಸ್ ನಲ್ಲಿ ವಿಶ್ವಜೀನಿತನಿಗೆ ಗೃಹಬಂಧನದಲ್ಲಿ ಇರಿಸಲಾಗಿತ್ತು. ವಿಶ್ವಜೀತ್ಗೆ ಕರೆ ಮಾಡಿದಾಗ ಕಿಡ್ನಾಪ್ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಆತನ ತಂದೆ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವಕನನ್ನು ರಕ್ಷಿಸಿ ಪೊಲೀಸರು ಆರೋಪಿ ಡ್ಯಾನಿ ಬೀಡಕರ್ ನನ್ನು ಅರೆಸ್ಟ್ ಮಾಡಿದ್ದಾರೆ.