ತುಮಕೂರು : ಟಾಟಾ ಏಸ್ ವಾಹನದಲ್ಲಿ ಜೈ ಭೀಮ್ ಹಾಡು ಹಾಕಿದ್ದಕ್ಕೆ ರೈಲ್ವೆ ಪೊಲೀಸ್ ಹಾಗೂ ಇನ್ನೊಬ್ಬ ವ್ಯಕ್ತಿಯಿಂದ ವಾಹನದ ಚಾಲಕ ಹಾಗೂ ವಾಹನದಲ್ಲಿದ್ದ 19 ವರ್ಷದ ಯುವಕನ ಮರ್ಮಾಂಗಕ್ಕೆ ಒದ್ದು ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ನಡೆದಿದೆ.
ಈ ಒಂದು ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗಿಡದಮುದ್ದಿನ ಹಳ್ಳಿ ಬಳಿ ಒಂದು ನಡೆದಿದೆ. ತುಮಕೂರು ತಾಲೂಕಿನ ಸಿರಿವರ ಗ್ರಾಮದ 19 ವರ್ಷದ ದೀಪು ಹಾಗೂ ಟಾಟಾ ಏಸ್ ವಾಹನದ ಚಾಲಕ ನರಸಿಂಹಮೂರ್ತಿ ಎನ್ನುವವರ ಮೇಲೆ ಹಲ್ಲೆ ನಡೆದಿದೆ. ರೈಲ್ವೆ ಪೊಲೀಸ್ ಚಂದ್ರಶೇಖರ್ ಹಾಗೂ ನರಸಿಂಹರಾಜು ಎಂಬುವವರಿಂದ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.
ಹಲ್ಲೆ ಕುರಿತು, ಟಾಟಾ ಏಸ್ ನಲ್ಲಿ ವಾಹನದಲ್ಲಿ ಅಂಬೇಡ್ಕರ್ ಹಾಡು ಹಾಕಿ ಹೋಗುತ್ತಿದ್ದೆವು. ಚಂದ್ರಶೇಖರ್ ನರಸಿಂಹರಾಜು ಬೈಕಿನಲ್ಲಿ ಬಂದಿದ್ದರು. ನಮ್ಮ ವಾಹನ ಅಡಗಟ್ಟಿ ಚಂದ್ರಶೇಖರ್ ಹಾಗೂ ನರಸಿಂಹರಾಜು ಗಲಾಟೆ ಮಾಡಿದ್ದಾರೆ. ಯಾಕೆ ಅಂಬೇಡ್ಕರ್ ಹಾಡು ಹಾಕಿದ್ದೀರಾ ನಿಮ್ಮ ಜಾತಿ ಯಾವುದು? ಎಂದು ಪ್ರಶ್ನಿಸಿದ್ದಾರೆ. ಜಾತಿ ಯಾವುದು ಎಂದು ಕೇಳಿ ಚಂದ್ರಶೇಖರ್ ಹಾಗೂ ನರಸಿಂಹರಾಜು ಪ್ರಶ್ನೆ ಮಾಡಿ ಹಲ್ಲೆ ಮಾಡಿದ್ದಾರೆ.
ಟಾಟಾ ಏಸ್ ವಾಹನದಿಂದ ಹೊರಗಡೆ ಎಳೆದು ಮನಸ್ಸೋ ಇಚ್ಛೆ ಇಬ್ಬರಿಗೆ ಥಳಿಸಿದ್ದಾರೆ. 19 ವರ್ಷದ ದೀಪು ಮರ್ಮಾಂಗಕ್ಕೆ ಒಂದು ಗಾಯಗೊಳಿಸಿದ್ದಾರೆ.ಕೂಡಲೇ ಇಬ್ಬರನ್ನು ತಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಹಲ್ಲೆಯಿಂದ ಗಾಯಗೊಂಡಿರುವ ಟಾಟಾ ಎಸ್ ಚಾಲಕ ನರಸಿಂಹಮೂರ್ತಿ ಯುವಕರ ಮೇಲೆ ಹಲ್ಲೆ ಸಂಬಂಧ ಗುಬ್ಬಿ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದೆ.