ಮೈಸೂರು : ಸಾಮಾನ್ಯವಾಗಿ ಕ್ರಿಕೆಟ್ ಆಡುವಾಗ ಎದುರು ಬದುರು ತಂಡದ ಆಟಗಾರರು ಜಗಳ ಆಡುವುದನ್ನು ನೋಡಿದ್ದೇವೆ. ಇದು ಅಂತರಾಷ್ಟ್ರೀಯ ಕ್ರಿಕೆಟ್ ಗೂ ಹೊರತಾಗಿಲ್ಲ. ಆದರೆ ಇದೀಗ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ವಡ್ಡರಗುಡಿಯಲ್ಲಿ ಯುವಕನೊಬ್ಬ ಸೋಲುವ ಮ್ಯಾಚ್ ಗೆಲ್ಲಿಸಿದ್ದಕ್ಕೆ ಆತನನ್ನು ಕೊಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಹೌದು ಮೈಸೂರು ಜಿಲ್ಲೆಯ ಹೆಚ್ಡಿ ಕೋಟೆ ತಾಲೂಕಿನ ವಡ್ಡರಗುಡಿ ಗ್ರಾಮದ ದಿವ್ಯ ಕುಮಾರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಕಳೆದ ಫೆಬ್ರವರಿ 24 ರಂದು ಬೀಚನಹಳ್ಳಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ನಡೆದಿತ್ತು. ನೇರಳೆ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು. ಜೆಪಿ ವಾರಿಯರ್ಸ್ ತಂಡದ ಪರವಾಗಿ ದಿವ್ಯ ಕುಮಾರ್ ಕ್ರಿಕೆಟ್ ಆಡಿದ್ದ. ಅಲ್ಲದೆ ಫೈನಲ್ ಪದ್ಯದಲ್ಲಿ ಕೂಡ ದಿವ್ಯ ಕುಮಾರ್ ಉತ್ತಮ ಪ್ರದರ್ಶನ ನೀಡಿ ಪಂದ್ಯ ಗೆಲ್ಲಿಸಿದ್ದ. ಡೆವಿಲ್ಸ್ ಸೂಪರ್ ಕಿಂಗ್ ತಂಡದ ವಿರುದ್ಧ ಫೈನಲ್ ಪಂದ್ಯ ನಡೆದಿತ್ತು ಪಾರ್ಟಿ ಮಾಡಿತ್ತು.
ಪಾರ್ಟಿ ಮಾಡಿದ ದಿನವೇ ಆತನ ಮೇಲೆ ಹಲ್ಲೆ ನಡೆಸಲಾಗಿತ್ತು. ಆದರೆ ಇದು ಅಪಘಾತ ಎಂದು ಹೇಳಲಾಗಿತ್ತು. ಪೊದೆಯೊಂದರ ಬಳಿ ದಿವ್ಯಕುಮಾರ್ ದೇಹ ಪತ್ತೆಯಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 20 ದಿನಗಳಿಂದ ಕೋಮಾದಲ್ಲಿದ್ದ ಯುವಕ ಇಂದು ಸಾವನ್ನಪ್ಪಿದ್ದಾನೆ. ಆದರೆ ಪೋಷಕರು ಕ್ರಿಕೆಟ್ ನಲ್ಲಿ ಸಿಕ್ಸರ್ ಹೊಡೆದು ಪಂದ್ಯ ಗೆಲ್ಲಿಸಿದಕ್ಕಾಗಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.