ಚಿಕ್ಕಮಗಳೂರು : ವಿಶೇಷವಾಗಿ ದೀಪವಳಿ ಹಬ್ಬದಂದು ಬಿಂಡಿಗ ಐತಿಹಾಸಿಕ ದೇವಿರಮ್ಮನ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಳಿ ಇರುವ ಬೆಟ್ಟದಲ್ಲಿ ಭಕ್ತರು ಬೆಟ್ಟ ಹತ್ತಲು ಆರಂಭಿಸಿದ್ದಾರೆ. ಸುಮಾರು 3000 ಅಡಿ ಎತ್ತರದಲ್ಲಿ ಈ ಒಂದು ಬೆಟ್ಟ ಇದ್ದು, ಇದೀಗ ಬೆಟ್ಟದಿಂದ ಯುವಕನೊಬ್ಬ ಕಾಲು ಜಾರಿ ಬಿದ್ದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹೌದು ದೇವಿರಮ್ಮ ಬೆಟ್ಟದಿಂದ ಯುವಕ ಕಾಲು ಜಾರಿ ಬಿದ್ದಿದ್ದು, ಸ್ಟ್ರೆಕ್ಚರ್ ಮೂಲಕ ಪೊಲೀಸ್ ಸಿಬ್ಬಂದಿಗಳು ಯುವಕನನ್ನು ಸುಮಾರು 5 ಕಿಲೋಮೀಟರ್ ವರೆಗೆ ಹೊತ್ತು ತಂದಿದ್ದಾರೆ. ಬಳಿಕ ಆಂಬುಲೆನ್ಸ್ ಮೂಲಕ ಚಿಕ್ಕಮಗಳೂರಿಗೆ ಚಿಕ್ಕಮಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
3000 ಅಡಿ ಎತ್ತರದ ಬೆಟ್ಟದ ಮೇಲೆ ಭಕ್ತರ ದಂಡೆ ಹರಿದುಬಂದಿದೆ. ದೇವಿರಮ್ಮ ದರ್ಶನ ಪಡೆಯಲು ದಾಂಗುಯಿಡಿಟ್ಟ ಜನರು ದುರ್ಗಮ್ಮ ಮಾರ್ಗದ ಬೆಟ್ಟದಿಂದ ಜಾರಿ ಬಿದ್ದ ಯುವಕ.ಈ ವೇಳೆ ಯುವಕನ ಕಾಲಿಗೆ ಗಂಭೀರವಾಗಿ ಗಾಯಗಳಾಗಿದೆ. ತಕ್ಷಣ ಪೊಲೀಸ್ ಸಿಬ್ಬಂದಿ ಸ್ಟ್ರಕ್ಚರ್ ಮೂಲಕ ಯುವಕನನ್ನು ಹೊತ್ತು ತಂದು ಆಂಬುಲೆನ್ಸ್ ಮೂಲಕ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ.
ಇದೆ ಅದರ ಬದಲಿ ಅನೇಕ ಜನರು ಇನ್ನೂ ಬಿಟ್ಟ ಹತ್ತುತ್ತಿದ್ದರು ಈ ವೇಳೆ ಕೆಲವು ಯುವತಿಯರು ಬೆಟ್ಟವನ್ನು ಏರಿ ಅಸ್ವಸ್ಥಗೊಂಡಿದ್ದರು. ಇದನ್ನು ಕಂಡು ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಯವರು ರಕ್ಷಣೆ ಮಾಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಳಿ ಇರುವ ಈ ಒಂದು ಬೆಟ್ಟದಲ್ಲಿ ದೇವರಮ್ಮ ದರ್ಶನ ಪಡೆಯಲು ಭಕ್ತರು ಬೆಟ್ಟ ಹತ್ತುತ್ತಿದ್ದರು.