ಬೀದರ್ : ಪೈಂಟರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೋಬ್ಬ ಮನೆಗೆ ಬಣ್ಣ ಹಚ್ಚುವ ವೇಳೆ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೀದರ್ ನಗರದ ವಿದ್ಯಾನಗರದಲ್ಲಿ ನಡೆದಿದೆ. ಆದರೆ ಕುಟುಂಬಸ್ಥರು ಇದು ಅಸಹಜ ಸಾವಲ್ಲ ಕೊಲೆ ಆಗಿದೆ ಎಂದು ಆರೋಪಿಸುತ್ತಿದ್ದಾರೆ.
ಹೌದು ವಿದ್ಯಾನಗರದ ವಿದ್ಯಾನಂದ ಸ್ವಾಮಿ ಎಂಬುವವರ ಮನೆಗೆ ಬಣ್ಣ ಹಚ್ಚುವ ವೇಳೆ ದುರ್ಘಟನೆ ನಡೆದಿದ್ದು. ಮಂದಕನಳ್ಳಿ ಗ್ರಾಮದ ಇಮ್ಯಾನುವೆಲ್ (23) ಬಣ್ಣ ಹಚ್ಚುವ ವೇಳೆ ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ. ಗುತ್ತಿಗೆದಾರ, ಮನೆ ಮಾಲೀಕ, ಇಂಜನೀಯರ್ಗಳೆ ಸಾವಿಗೆ ಕಾರಣ ಎಂದು ಗ್ರಾಮಸ್ಥರ ಆಕ್ರೋಶ ವ್ತಕ್ತಪಡಿಸಿದ್ದಾರೆ.
ಬ್ರಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಯುವಕನ ಶವದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ಲದೆಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಗಾಂಧಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.