ವಿಜಯಪುರ : ರಾಜ್ಯದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಾಲು ಸಾಲು ದುರಂತಗಳು ಸಂಭವಿಸಿವೆ ಮಂಡ್ಯ ಚಿಕ್ಕಬಳ್ಳಾಪುರ ರಾಯಚೂರು ಸೇರಿದಂತೆ ಹಲವೆಡೆ ಹೃದಯಾಘಾತದಿಂದ ಹಾಗು ಇತರೆ ದುರಂತಗಳಿಂದ ಹಲವರು ಸಾವನ್ನಪ್ಪಿದ್ದಾರೆ. ಇದೀಗ ಗಣೇಶ ವಿಸರ್ಜನೆ ವೇಳೆ ಕರೆಂಟ್ ಶಾಕ್ ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ವಿಜಯಪುರ ನಗರದ ಟಾಂಗಾ ಸ್ಟಾಂಡ್ ಬಳಿ ಈ ಒಂದು ಘಟನೆ ನಡೆದಿದೆ.
ವಿಜಯಪುರದ ಡೋಬೆಲೆ ಗಲ್ಲಿ ನಿವಾಸಿ ಶುಭಂ ಸಂಕಳ (22) ಸಾವನ್ನಪ್ಪಿದ್ದಾನೆ. ನಗರದಲ್ಲಿ ಏಳನೇ ದಿನದ ನೂರಾರು ಗಣೇಶನ ಮೂರ್ತಿಗಳು ವಿಸರ್ಜನೆ ಮಾಡಲಾಗುತ್ತಿತ್ತು ಮೂರ್ತಿಗಳನ್ನು ಕೋಲಿನಿಂದ ವಿದ್ಯುತ್ ತಂತಿ ಮೇಲೆತ್ತಿದ್ದಾನೆ ಶುಭಂ. ಈ ವೇಳೆ ಕೋಲಿನಿಂದ ಮೇಲೆತ್ತಿದ್ದಾಗ ವಿದ್ಯುತ್ ಪ್ರವಹಿಸಿ ದುರಂತ ಸಂಭವಿಸಿದೆ. ಘಟನೆ ನಡೆದ ಹಿನ್ನೆಲೆ ಸ್ಥಳದಲ್ಲೇ ಡಿವೈಎಸ್ಪಿ ಬಸವರಾಜ್ ಯಲಿಗಾರ ಹಾಗೂ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.a