ಮೈಸೂರು : ಯುವಕನೊಬ್ಬ ತನ್ನ ಮೊಬೈಲ್, ಬಟ್ಟೆ ಎಲ್ಲಾ ಬಿಚ್ಚಿ ಸೇತುವೆ ಮೇಲೆ ಇಟ್ಟು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನಲ್ಲಿ ನಡೆದಿದೆ.
ಟಿ ನರಸೀಪುರ ಪಟ್ಟಣದ ಕಬಿನಿ ಮೇಲ್ಸೇತುವೆ ಬಳಿ ಕೇತಳ್ಳಿಗ್ರಾಮದ ಮಲ್ಲಿಕಾರ್ಜುನ್ ನದಿಗೆ ಹಾರಿದ ಯುವಕ ಎಂದು ತಿಳಿದುಬಂದಿದೆ. ಕೇತಳ್ಳಿ ಗ್ರಾಮದ ಮಲ್ಲೇಶ್ ಎಂಬುವರ ಪುತ್ರ ಮಲ್ಲಿಕಾರ್ಜುನ್ ಆತ್ಮಹತ್ಯೆಗು ಮುನ್ನ ಮೊಬೈಲ್, ಬಟ್ಟೆಯನ್ನು ಸೇತುವೆ ಮೇಲೆ ಇಟ್ಟು ನದಿಗೆ ಹಾರಿದ್ದಾನೆ.
ಸದ್ಯ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಈಜುಗಾರರಿಂದ ಯುವಕನ ಶವಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ಘಟನೆ ಕುರಿತಂತೆ ಟಿ ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.