ಮೈಸೂರು : ಮೈಸೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಬೆಳ್ಳಂ ಬೆಳಗ್ಗೆ ಯುವಕನ ಭೀಕರ ಕೊಲೆಯಾಗಿದೆ. ಗೆಳೆಯನನ್ನು ಯುವಕರು ಅಟ್ಟಾಡಿಸಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮೈಸೂರು ನಗರದ ಶಾಂತಿನಗರದಲ್ಲಿ ಈ ಒಂದು ಹತ್ಯೆ ನಡೆದಿದೆ .
ಚಾಕು ಇರಿದಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಸುಕಿನ ಜಾವ 5.45 ಸುಮಾರಿಗೆ ಕೊಲೆಗೈದು ಹಂತಕರು ಪರಾರಿ ಆಗಿದ್ದಾರೆ. ಮೈಸೂರಿನ ಶಾಂತಿ ನಗರದಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ. ಮೃತ ಯುವಕನನ್ನು ಸೈಯದ್ ಸೂಫಿಯಾನ್ ಎಂದು ತಿಳಿದುಬಂದಿದೆ. ರಸ್ತೆಯಲ್ಲಿ ಅಟ್ಟಾಡಿಸಿ ಚಾಕುವಿನಿಂದ ಇರಿದು ಇಬ್ಬರು ಸ್ನೇಹಿತರು ಭೀಕರವಾಗಿ ಕೊಲೆ ಮಾಡಿದ್ದಾರೆ.
ಶಾಂತಿನಗರದಲ್ಲಿ ಶಾಹೀದ್ ಮತ್ತು ಜಹೀದ್ ಎನ್ನುವವರಿ ಗೆಳೆಯ ಸೈಯದ್ ಗೆ ಚಾಕು ಇರಿದು ಅಟ್ಟಹಾಸ ಮೆರೆದಿದ್ದಾರೆ. ಕೊಲೆ ಮಾಡಿದ ಬಳಿಕ ಇಬ್ಬರು ಸ್ಥಳದಿಂದ ಪರಾರಿ ಆಗಿದ್ದಾರೆ ತೀವ್ರ ರಕ್ತ ಸ್ರಾವದಿಂದ ಸಯ್ಯದ್ ನರಳಾಡಿ ಪ್ರಾಣ ಬಿಟ್ಟಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲೀಸಲಾಗಿತ್ತಾದರೂ ಅಷ್ಟರಲ್ಲೇ ಸೈಯದ್ ಸಾವನ್ನಪ್ಪಿದ್ದ.ಕೊಲೆಯ ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.








