ವಿಜಯಪುರ : ಇತ್ತೀಚಿಗೆ ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ವಿಜಯಪುರದಲ್ಲಿ ತಡರಾತ್ರಿ ಯುವಕನ ಭೀಕರ ಕೊಲೆಯಾಗಿದ್ದು, ದುಷ್ಕರ್ಮಿಗಳು ಯುವಕನ ಮೇಲೆ ಮಾರಕಷ್ಟಗಳಿಂದ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರಬರವಾಗಿ ಹತ್ಯೆಗೈದಿರುವ ಘಟನೆ ನಗರದ ಎಪಿಎಂಸಿ ಮೇಕೆ ಹಾಗೂ ಕುರಿ ಮಾರುಕಟ್ಟೆ ಬಳಿ ನಡೆದಿದೆ.
ಕೊಲೆಯಾದ ಯುವಕನನ್ನು ರೋಹಿತ್ ವಸಂತ್ ಪವಾರ್ (23) ಎಂದು ತಿಳಿದುಬಂದಿದೆ. ವಿಜಯಪುರ ನಗರದ ಕಂಬಾರ ಓಣಿ ನಿವಾಸಿ ರೋಹಿತ್ನನ್ನು ದುಷ್ಕರ್ಮಿಗಳು ಕೊಲೆಗೈದು ಮುಳ್ಳುಕಂಟಿಯಲ್ಲಿ ಶವ ಬಿಸಾಡಿದ್ದಾರೆ. ಘಟನಾ ಸ್ಥಳದಲ್ಲಿ ಬಿಯರ್ ಬಾಟಲ್ ಹಾಗೂ ಚಿಪ್ಸ್ ಪ್ಯಾಕೆಟ್ ಪತ್ತೆಯಾಗಿದೆ. ಮೃತನ ಪರಿಚಯಸ್ಥರಿಂದಲೇ ಕೊಲೆ ನಡೆದಿರುವ ಶಂಕೆಯನ್ನು ಮೃತನ ಕುಟುಂಬ ಆರೋಪಿಸಿದೆ.
ಮೇಲ್ನೋಟಕ್ಕೆ ಇದು ಯುವಕನ ಪರಿಚಯಸ್ಥರಿಂದಲೇ ಈ ಒಂದು ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.ರೋಹಿತ್ ಕೊಲೆ ಬಗ್ಗೆ ಆತನ ಸ್ನೇಹಿತ ಖಾಲಿದ್ ಇನಾಂದಾರ್ ನಿಮ್ಮ ಮಗನ ಕೊಲೆಯಾಗಿದೆ ಎಂದು ತಿಳಿಸಿದಾಗ ಕುಟುಂಬಸ್ಥರೆಲ್ಲರೂ ಗಾಬರಿಯಾಗಿ ಎಲ್ಲೆಡೆ ರೋಹಿತ್ ಗಾಗಿ ಹುಡುಕಾಡಿದ್ದಾರೆ.ಖಾಲೀದ್ ಮನೆಗೆ ಹೋದರೂ ಖಾಲೀದ್ ಆಗಲಿ ರೋಹಿತ್ ಅಲ್ಲಿರಲಿಲ್ಲ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ನಂತರ ರೋಹಿತ್ಗಾಗಿ ಹುಡುಕಾಡಿದಾಗ ಆತನ ಶವ ಎಪಿಎಂಸಿ ಆವರಣದಲ್ಲಿ ಕಂಡು ಬಂದಿದೆ. ತಕ್ಷಣ ಎಪಿಎಂಸಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ವಿಜಯಪುರ ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಕೊಲೆ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.