ಕೋಲಾರ : ಮೀನು ಹಿಡಿಯುವ ವಿಚಾರವಾಗಿ ಸೋದರ ಸಂಬಂಧಿಗಳ ನಡುವೆ ಗಲಾಟೆ ನಡೆದಿದ್ದು, ರಾಜಿ ಪಂಚಾಯಿತಿಯ ವೇಳೆ ಚಾಕುವಿನಿಂದ ಇರಿದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಗ್ರಾಮದಲ್ಲಿ ನಡೆದಿದೆ.
ಈ ಒಂದು ದುರ್ಘಟನೆಯಲ್ಲಿ ಕೊಲೆಯಾದ ಯುವಕನನ್ನು ಲೋಕೇಶ್ ಎಂದು ಹೇಳಲಾಗುತ್ತಿದ್ದು, ಮತ್ತೊಬ್ಬ ಯುವಕ ದರ್ಶನ್ ಗೆ ಗಂಭೀರವಾದಂತಹ ಗಾಯಗಳಾಗಿದೆ. ರಾಜಿ ಪಂಚಾಯಿತಿ ವೇಳೆ ಸಹೋದರ ಸಂಬಂಧಿ ಪ್ರಮೋದ್ ದಿಂದ ಈ ಕೃತ್ಯ ನಡೆದಿದೆ. ಈಶ್ವರ ಕೆರೆಯಲ್ಲಿ ಮೀನು ಹಿಡಿಯುವಾಗ ಇಬ್ಬರ ನಡುವೆ ಗಲಾಟೆ ನಡೆದಿತ್ತು.
ಗಲಾಟೆ ಕುರಿತಂತೆ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯತಿ ನಡೆಯುತ್ತಿತ್ತು, ಈ ವೇಳೆ ಪ್ರಮೋದ್ ಲೋಕೇಶ್ ಗೆ ಚಾಕು ಇರಿದು ಭೀಕರವಾಗಿ ಗಾಯಗೋಳಿಸಿದ್ದಾನೆ. ತಕ್ಷಣ ಲೋಕೇಶ್ ನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಗಾಯಾಳು ಲೋಕೇಶ್ ಸಾವನಪ್ಪಿದ್ದಾನೆ.
ಮತ್ತೊಬ್ಬ ಗಾಯಾಳು ದರ್ಶನಗೆ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸ್ಥಳಕ್ಕೆ ಕೋಲಾರ ಎಸ್ಪಿ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮಾಸ್ತಿ ಪೊಲೀಸ್ ಠಾಣಗತಿಯಲ್ಲಿ ಪ್ರಕರಣ ದಾಖಲಾಗಿದೆ.