ಬೆಂಗಳೂರು : ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಮಚ್ಚು ಮತ್ತು ರಾಡ್ ನಿಂದ ಯುವಕನೊಬ್ಬನ ಮೇಲೆ ಹಲವರು ಹಲ್ಲೆ ನಡೆಸಲಾಗಿದ್ದು, ಹಲ್ಲ್ಯ ವೇಳೆ ಯುವಕನ ಮುಂಗೈ ಕಟ್ ಆಗಿದ್ದು, ತಕ್ಷಣ ಯುವಕನನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೈಲನರಸಾಪುರದಲ್ಲಿ ನಡೆದಿದೆ.
ನಿನ್ನೆ ಯುವಕನ ವಾಹನವನ್ನು ಅಡ್ಡಗಟ್ಟಿ ಪುಂಡರು ರಸ್ತೆಯಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಬೈಲನರಸಾಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗ್ರಾಮದ ಸೈಯದ್ ಎಂಬುವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ.
ಹಲ್ಲೆಯ ಪರಿಣಾಮ ಯುವಕನ ಮುಂಗೈ ಕಟ್ಟಾಗಿದೆ. ಗ್ರಾಮದ ಸೈಯದ್ ಜುಲೈನ ಮೇಲೆ ಮಾರಣಾಂತಿಕ ಹಲ್ಲಿ ನಡೆಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಜಹೀದ್ ಖಾನ್ ಆದಿಲ್ ಸಾಮ್ರಾಟ್, ಹಾಗೂ ಆಸಿಫ್ ಖಾನ್ ಎನ್ನುವರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.