ಬೆಂಗಳೂರು : ಬೆಂಗಳೂರಿನಲ್ಲಿ ಯುವತಿಯರಿಗೆ ಬೀದಿ ಪುಂಡರು ಕಿರುಕುಳ ನೀಡಿದ್ದಾರೆ. ಬೈಕ್ ನಲ್ಲಿ ಹೋಗುತ್ತಿದ್ದ ಯುವತಿಯನ್ನು ಕಿಡಿಗೇಡಿಗಳು ಫಾಲೋ ಮಾಡಿ ಕಿರುಕುಳ ನೀಡಿದ್ದಾರೆ. ಸುಮಾರು 2 ಕಿಲೋಮೀಟರ್ ವರೆಗೂ ಯುವತಿಯನ್ನು ಪುಂಡರು ಫಾಲೋ ಮಾಡಿದ್ದಾರೆ.
ಒಂದೇ ಬೈಕ್ ನಲ್ಲಿ ಮೂವರು ಪುಂಡರು ಯುವತಿಯನ್ನು ಫಾಲೋ ಮಾಡಿ ಕಿರುಕುಳ ನೀಡಿದ್ದಾರೆ. ಯುವತಿ ಸ್ಕೂಟಿ ಮೇಲೆ ತೆರಳುತ್ತಿದ್ದರೆ, ಮತ್ತೊಂದು ಸ್ಕೂಟಿಯಲ್ಲಿ ಪುಂಡರು ಯುವತಿ ಹತ್ತಿರ ಅಡ್ಡಾದಿಡ್ಡಿ ಹಿಂದೆ ಮುಂದೆ ಚಲಿಸಿದ್ದಾರೆ. ಬೇಕು ಬೇಕು ಅಂತಾನೆ ಆಕೆಯ ಪಕ್ಕದಲ್ಲಿ ಬೈಕ್ ಚಲಾಯಿಸಿದ್ದಾರೆ ಕಾರಿನಲ್ಲಿ ಹಿಂದೆ ಬರುತ್ತಿದ್ದ ವ್ಯಕ್ತಿ ಈ ವಿಡಿಯೋ ಸೆರೆ ಹಿಡಿದು ವಿಡಿಯೋ ಸಮೇತ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.








