ಬೆಂಗಳೂರು : ಬೆಂಗಳೂರಿನಲ್ಲಿ ಗನ್ ಮಿಸ್ ಫೈರಿಂಗ್ ಆಗಿ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಗನ್ ಮಿಸ್ ಫೈರ್ ಆಗಿ ಯುವತಿ ರೆಚೆಲ್ ಗೆ ಗಂಭೀರ ಗಾಯವಾಗಿದೆ.
ಗೆಳೆಯ ನಿಖಿಲ್ ಗೆ ಸೇರಿದ ಗನ್ ಚೆಕ್ ಮಾಡುವಾಗ ಮಿಸ್ ಫೈರಿಂಗ್ ಆಗಿದ್ದು, ಈ ವೇಳೆ ರೆಚೆಲ್ ಗೆ ಹೊಟ್ಟೆಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜುಲೈ 28 ರಂದು ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.