ಯಾದಗಿರಿ : ಯಾದಗಿರಿಯಲ್ಲಿ ಹೃದಯ ವಿದ್ರಾವಕ ಘಟನೆ ಒಂದು ನಡೆದಿದ್ದು, ಜಾತಿ ನಿಂದನೆ ಪ್ರಕರಣಕ್ಕೆ ಹೆದರಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಮಹಿಬೂಬ್ (22) ಎನ್ನುವ ನೇಣು ಬಿಗಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗನ ಆತ್ಮಹತ್ಯೆ ವಿಷಯ ತಿಳಿದು ತಂದೆಗೆ ಹೃದಯಘಾತವಾಗಿದೆ. ಒಂದೇ ದಿನ ಒಂದೇ ಮನೆಯಲ್ಲಿ ಎರಡು ಸಾವು ಆಗಿವೆ ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ.
ಜಮೀನಿನಲ್ಲಿ ದಾರಿಯ ವಿಚಾರಕ್ಕೆ ಜಗಳ ಆಗಿತ್ತು. ಹಿರಿಯರು ನ್ಯಾಯ ಪಂಚಾಯತಿ ಮಾಡಿ ಬಗೆಹರಿಸಿದ್ದರು. ಆದರೂ ಬೇರೆ ಊರಿನ ಮುಖಂಡ ಜಾತಿ ನಿಂದನೆ ಪ್ರಕರಣ ದಾಖಲಿಸಲು ಮುಂದಾಗಿದ್ದ. ಜಾತಿನಿಂದನೆ ಕೇಸ್ ದಾಖಲಿಸಿ, ಜೈಲಿಗೆ ಕಳುಹಿಸುತ್ತೇನೆ ಎಂದು ಆತ ಬೆದರಿಕೆ ಹಾಕಿದ್ದ. ಜೈಲಿಗೆ ಹೋದರೆ ಮರ್ಯಾದೆ ಹೋಗುತ್ತದೆ ಎಂದು ಮೆಹಬೂಬ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇತ್ತ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ತಂದೆ ಸೈಯದ್ ಅಲಿ ಅವರಿಗೆ ಹೃದಯಾಘಾತ ಆಗಿದೆ. ಸೈಯದ್ ಅಲಿ ಅವರನ್ನು ತಕ್ಷಣ ಕಲ್ಬುರ್ಗಿಯ ಜಯದೇವ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸೈಯದ್ ಅಲಿ ಸಾವನಪ್ಪಿದ್ದು ತಂದೆ ಮಗ ಇಬ್ಬರು ಒಂದೇ ದಿನ ಸಾವನಪ್ಪಿದ್ದು ಮನೆಯಲ್ಲಿ ಕುಟುಂಬಸ್ಥರದ ಮುಗಿಲು ಮುಟ್ಟಿದೆ.