ಬೆಂಗಳೂರು : ಬೆಂಗಳೂರಿನಲ್ಲಿ ಯುವಕನೊಬ್ಬ ಎಂಬಿಎ ಸೀಟ್ ಸಿಗಲಿಲ್ಲ ಎಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ನೆಲಮಂಗಲದಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.ಎಂಬಿಎ ಸೀಟ್ ಸಿಗಲಿಲ್ಲ ಎಂದು ಶಶಾಂಕ್ (23) ನೇಣಿಗೆ ಶರಣಾಗಿದ್ದಾನೆ.
ನೆಲಮಂಗಲದ ವಿಜಯನಗರದ ತಿಮ್ಮಕ್ಕ ಲೇಔಟ್ ನಲ್ಲಿ ತಡರಾತ್ರಿ ಶಶಾಂಕ್ ಮನೆಯಲ್ಲೇ ಫ್ಯಾನ್ ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.








