ಯಾದಗಿರಿ : ಕುಡಿದ ಮತ್ತಿನಲ್ಲಿ ರಾಂಗ್ ಸೈಡ್ ಬಂದು ಸಾರಿಗೆ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾಳನೂರು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ತಾಳಿಕೋಟೆಯಿಂದ ಹುಣಸಗಿ ಮಾರ್ಗವಾಗಿ ಬಸ್ ಶಹಾಪುರಕ್ಕೆ ಹೊರಟಿತ್ತು. ಪ್ರಯಾಣಿಕರು ಇಳಿಯುತ್ತಿದ್ದರಿಂದ ಮಾಳನೂರಿನಲ್ಲಿ ಬಸ್ ಅನ್ನು ನಿಲ್ಲಿಸಲಾಗಿತ್ತು. ಈ ವೇಳೆ ಕುಡಿದ ಮತ್ತಿನಲ್ಲಿ ಬೈಕ್ ನಲ್ಲಿ ಸವಾರ ಮದನಪ್ಪ ರಾಂಗ್ ಸೈಡ್ ಬಂದಿದ್ದಾನೆ.
ಅಶ್ಲೀಲ ಪದಗಳಿಂದ ನಿಂದಿಸಿ ಕಂಡಕ್ಟರ್ ಕಪಾಳಕ್ಕೆ ಬೈಕ್ ಸವಾರ ಹೊಡೆದಿದ್ದಾನೆ. ಗ್ರಾಮದ ಮದನಪ್ಪ ಎಂಬಾತನಿಂದ ಸಾರಿಗೆ ಸಿಬ್ಬಂದಿಗಳ ಮೇಲೆ ಇದೀಗ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಚಾಲಕ ಮತ್ತು ಕಂಡಕ್ಟರ್ ಗೆ ಹುಣಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಆರೋಪಿಯ ಮದನಪ್ಪ ವಿರುದ್ಧ ಹುಣಸಗಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.