ಯಾದಗಿರಿ : ಯಾದಗಿರಿ ಡಿಸಿ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ಸೃಷ್ಟಿಸಿ ಮಹಿಳಾ ಅಧಿಕಾರಿಗೆ ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಹೆಸರಿನಲ್ಲಿ ವಂಚನೆ ಎಸಗಿದ್ದು, ವಾಟ್ಸಾಪ್ ಪ್ರೊಫೈಲ್ ಗೆ ಡಿಸಿ ಹೆಸರು ಹಾಗೂ ಫೋಟೋ ಬಳಸಿ ವಂಚಕರು ವಂಚನೆಯಾಗಿದ್ದಾರೆ.
ಡಿಸಿ ಹೆಸರು ಬಳಸಿ ಮಹಿಳಾಧಿಕಾರಿಗೆ ಅಪರಿಚಿತ ವ್ಯಕ್ತಿ ಮೆಸೇಜ್ ಮಾಡಿದ್ದಾನೆ. 50 ಸಾವಿರ ರೂಪಾಯಿ ಕಳುಹಿಸುವಂತೆ ಮಹಿಳಾ ಅಧಿಕಾರಿಗೆ ವಂಚನೆ ಎಸಗಿದ್ದಾನೆ. ಆರೋಗ್ಯ ಇಲಾಖೆ ಮಹಿಳಾಧಿಕಾರಿ ಜ್ಯೋತಿ ಕಟ್ಟಿಮನಿಗೆ ವಂಚಕ ಮೆಸೇಜ್ ಮಾಡಿದ್ದಾನೆ. ನನ್ನ ನಂಬರ್ ಇಂಟರ್ನೆಟ್ ಬ್ಯಾಂಕಿಂಗ್ ನಲ್ಲಿ ಸಮಸ್ಯೆ ಆಗಿದೆ ತಕ್ಷಣ ರೂ. 50,000 ಹಾಕಿ ಎಂದು ಜ್ಯೋತಿಗೆ ಮೆಸೇಜ್ ಮಾಡಿದ್ದಾನೆ.ಡಿಸಿ ಹಣ ಕೇಳುತ್ತಿದ್ದಾರೆ ಎಂದು ಅಧಿಕಾರಿಯಾಗಿ ಜ್ಯೋತಿ ಗೂಗಲ್ ಪೇ ಮಾಡಿದ್ದಾರೆ. ಬಳಿಕ 20000 ಹಾಕುವಂತೆ ಮತ್ತೆ ಅಪರಿಚಿತ ವ್ಯಕ್ತಿ ಮೆಸೇಜ್ ಮಾಡಿದ್ದಾನೆ.
ಅನುಮಾನ ಗೊಂಡ ಅಧಿಕಾರಿ ಜ್ಯೋತಿ ಡಿಸಿ ಹರ್ಷಲ್ ಬಳಿ ಕೇಳಿದ್ದಾರೆ ಯಾವುದೇ ಮೆಸೇಜ್ ಕಳುಹಿಸಿಲ್ಲ ಎಂದು ಡಿಸಿ ಹರ್ಷಲ್ ಬೋಯರ್ ಸ್ಪಷ್ಟನೆ ನೀಡಿದ್ದಾರೆ. ಯಾದಗಿರಿ ಡಿಸಿ ಹರ್ಷಲ್ ಸ್ಪಷ್ಟಪಡಿಸಿದಾಗ ಇದು ವಂಚನೆ ಎಂದು ಬೆಳಕಿಗೆ ಬಂದಿದೆ. ಅಪರಿಚಿತರು ಡಿಸಿ ಫೋಟೋ ಗಳಿಸಿ ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ ಈ ಕುರಿತು ಮಹಿಳಾ ಅಧಿಕಾರಿ ಜ್ಯೋತಿ ಯಾದಗಿರಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಾಟ್ಸಪ್ ಪ್ರೊಫೈಲ್ ಬಳಸಿ ವಂಚಿಸಿದವನಿಗೆ ಪೊಲೀಸರು ಶೋಧನೆ ನಡೆಸುತ್ತಿದ್ದಾರೆ.








