ಯಾದಗಿರಿ : ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂದು ಪತಿಯನ್ನೇ ಪ್ರಿಯಕರನ ಜೊತೆಗೆ ಸೇರಿ ಪತ್ನಿ ಒಬ್ಬಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ನಡೆದಿದೆ.
ಹತ್ಯೆಯಾದ ಪತಿಯನು ಮಾನಪ್ಪ ಬಂಕಲದೊಡ್ಡಿ (34) ಎಂದು ತಿಳಿದುಬಂದಿದೆ. ಪತ್ನಿ ಲಕ್ಷ್ಮಿಯ ಜೊತೆಗೆ ಮಾನಪ್ಪ ಕಳೆದ 11 ವರ್ಷಗಳ ಹಿಂದೆ ಮದುವೆಯಾಗಿದ್ದ.ಆದರೆ ಇತ್ತೀಚೆ ಲಕ್ಷ್ಮೀ ದಾರಿ ತಪ್ಪಿದ್ದಳು. ಕೆಲವರ ಜತೆ ಅಕ್ರಮ ಸಂಬಂಧ ಇಟ್ಕೊಂಡಿದ್ದಳು. ಈ ವಿಷಯ ಗಂಡನಿಗೆ ಗೊತ್ತಾಗಿ ಜಗಳ ಆಗಿತ್ತು.
ಮೊನ್ನೆ ರಾತ್ರಿ ದಂಪತಿ ನಡುವೆ ಮತ್ತೆ ಗಲಾಟೆ ಆಗಿದೆ. ಅದೇ ರಾತ್ರಿ ಪ್ರಿಯಕರನನ್ನ ಮನೆಗೆ ಕರೆಸಿಕೊಂಡಿರುವ ಲಕ್ಷ್ಮೀ, ದಿಂಬಿನಿಂದ ಪತಿಯ ಉಸಿರು ಗಟ್ಟಿಸಿಕೊಂದಿದ್ದಾಳೆ. ಬಳಿಕ ಹೃದಯಾಘಾತದ ನಾಟಕವಾಡಿದ್ದಾಳೆ.ಕೊಲೆ ಬಳಿಕ ತನಗೇನು ಗೊತ್ತೇ ಇಲ್ಲ ಎನ್ನುವಂತೆ ಮೃತ ಗಂಡನ ಮುಂದೆ ಕುಳಿತು ಕಣ್ಣೀರ ಕೋಡಿ ಹರಿಸಿದ್ದಾಳೆ. ಹೃದಯಾಘಾತದಿಂದ ಸತ್ತ ಎಂದು ಸಂಬಂಧಿಕರನ್ನ ನಂಬಿಸೋಕೆ ಯತ್ನಿಸಿದ್ದಾಳೆ.
ಆದರೆ ಮಾನಪ್ಪನ ಮುಖದ ಮೇಲೆ ಅಲ್ಲಲ್ಲಿ ಗಾಯಗಳಾಗಿರುವುದನ್ನು ಊರಿನವರು ಗಮನಿಸಿದ್ದಾರೆ.ಈ ವೇಳೆ ಊರಿನವರಿಗೆ ಇದು ಹಾರ್ಟ್ ಅಟ್ಯಾಕ್ ಅಲ್ಲ ಕೊಲೆ ಎಂದು ಖಚಿತಪಡಿಸಿದ್ದಾರೆ.ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಸಿಪಿಐ, ಆನಂದ ವಾಗ್ಮೋಡೆ, ಡಿವೈಎಸ್ಪಿ ಜಾವೀದ್ ಇನಾಮದಾರ್ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದಿದ್ದಾರೆ. ಬಳಿಕ ಪತ್ನಿ ಲಕ್ಷ್ಮೀಯನ್ನು ಬಂಧಿಸಿದ್ದು, ಇನ್ನು ಆಕೆಗೆ ಸಹಕರಿಸಿದ ಪ್ರೀಯಕರನಿಗಾಗಿ ಬಲೆ ಬೀಸಿದ್ದಾರೆ.