ಯಾದಗಿರಿ : ಯಾದಗಿರಿಯ ಪಿಎಸ್ಐ ಪರಶುರಾಮ್ ಎನ್ನುವವರ ಅನುಮಾನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪರಶುರಾಮ್ ಪತ್ನಿ ಶ್ವೇತಾ ಎನ್ನುವವರು ಕಾಂಗ್ರೆಸ್ ಶಾಸಕ ಚೆನ್ನಾ ರೆಡ್ಡಿ ಪಾಟೀಲ್ ಹಾಗೂ ಪುತ್ರ ಪಂಪನಗೌಡ ವಿರುದ್ಧ ಯಾದಗಿರಿ ಎಸ್ಪಿ ಸಂಗೀತ ಅವರಿಗೆ ದೂರು ಸಲ್ಲಿಸಿದ್ದಾರೆ.
ಹೌದು ಕಾಂಗ್ರೆಸ್ ಶಾಸಕ ಚೆನ್ನರೆಡ್ಡಿ ಪಾಟೀಲ್ ಹಾಗೂ ಪುತ್ರ ಪಂಪನಗೌಡ ವಿರುದ್ಧ ದೂರು ದಾಖಲಾಗಿದೆ. ಪೋಸ್ಟಿಂಗ್ ಗಾಗಿ ಪದೇ ಪದೇ ಹಣಕ್ಕೆ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿ ಬಂದಿದ್ದು, ಇದೀಗ ಯಾದಗಿರಿ ಎಸ್‌ಪಿ ಸಂಗೀತಾಗೆ ಮೃತ ಪಿ ಎಸ ಐ ಪರಶುರಾಮ್ ಪತ್ನಿ ಶ್ವೇತಾ ದೂರು ಸಲ್ಲಿಸಿದ್ದಾರೆ.
ಯಾದಗಿರಿ PSI ಪರಶುರಾಮ್ ಸಾವಿಗೆ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ವಿರುದ್ಧ ಕುಟುಂಬಸ್ಥರು ಇದೀಗ ಆರೋಪ ಮಾಡುತ್ತಿದ್ದಾರೆ. ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದೆ. ಕಳೆದ ವರ್ಷವಷ್ಟೇ 30 ಲಕ್ಷ ರೂಪಾಯಿ ಕೊಟ್ಟು ಪೋಸ್ಟಿಂಗ್ ಹಾಕಿಸಿಕೊಂಡಿದ್ದ ಯಾದಗಿರಿ ನಗರ ಠಾಣೆಗೆ ಪೋಸ್ಟಿಂಗ್ ಹಾಕಿಸಿಕೊಂಡಿದ್ದ.
ಎಂಪಿ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ತಿಂಗಳು ವರ್ಗಾವಣೆಯಾಗಿದ್ದ. ನೀತಿ ಸಂಹಿತೆ ಮುಗಿದ ಕೂಡಲೇ ಮತ್ತೆ ಠಾಣೆಗೆ ವಾಪಸ್ ಆಗಿದ್ದಾನೆ. ಇದರಿಂದ ಸಾಲದ ಸುಳಿಗೆ ಸಿಲುಕಿದ್ದ ಪಿಎಸ್ಐ ಪರಶುರಾಮ್. ಮತ್ತೆ ನಿಯಮ ಬಾಹಿರವಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಒಂದು ವರ್ಷ ಪೂರೈಸುವ ಮೊದಲೇ ವರ್ಗಾವಣೆಯಾಗಿತ್ತು. ಇದರಿಂದ ಪಿಎಸ್ಐ ಪರಶುರಾಮ್ ಒತ್ತಡಕ್ಕೆ ಒಳಗಾಗಿದ್ದ.
ಕಿರುಕುಳದ ಬಗ್ಗೆ ಪತ್ನಿ ಶ್ವೇತಾಗೆ ಪಿಎಸ್ಐ ಪರಶುರಾಮ್ ಹೇಳಿದ್ದ. ಯಾದಗಿರಿ ಸೈಬರ್ ಠಾಣೆಯ ಪಿಎಸ್ಐ ಪರಶುರಾಮ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಯಾದಗಿರಿ ಶಾಸಕ ಚೆನ್ನರೆಡ್ಡಿ ಪಾಟೀಲ್ ಗೆ ದುಡ್ಡಿನ ಆಸೆ ಹೆಚ್ಚಾಗಿದೆ. ಯಾದಗಿರಿ ಠಾಣೆಯಿಂದ ಅವಧಿಪೂರ್ವ ವರ್ಗಾವಣೆ ಮಾಡಿದ್ದಾರೆ. ಅವಧಿಪೂರ್ವ ವರ್ಗಾವಣೆಯಿಂದ ಪಿಎಸ್ಐ ಪರಶುರಾಮ್ ನೊಂದಿದ್ದ.
7 ತಿಂಗಳ ಅವಧಿಯಲ್ಲಿ ಎಂಎಲ್ಎ ಬೇರೆಯವರಿಗೆ ಪೋಸ್ಟಿಂಗ್ ನೀಡಿದ್ದಾರೆ. ವರ್ಗಾವಣೆ ಮಾಡುತ್ತಿರುವುದು ಸಿಎಂ ಗೃಹ ಸಚಿವರ ಗಮನಕ್ಕೆ ಬರಲಿಲ್ಲವ? ಎಂದು ಅಮೃತ ಪಿಎಸ್ಐ ಪರಶುರಾಮ್ ಪದ್ಮಶ್ವೇತ ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತು ಯಾದಗಿರಿ ಎಸ್ಪಿ ಸಂಗೀತ ಅವರಿಗೆ ಶ್ವೇತಾ ಅವರು ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಪುತ್ರ ಪಂಪನಗೌಡ ವಿರುದ್ಧ ದೂರು ದಾಖಲಿಸಿದ್ದಾರೆ.