ಯಾದಗಿರಿ : ಪತ್ನಿಗೆ ಬೇರೊಬ್ಬನ ಜೊತೆಗೆ ಅಕ್ರಮ ಸಂಬಂಧವಿದೆ ಎಂದು ಶೀಲವನ್ನು ಶಂಕಿಸಿ ಪತ್ನಿಯ ಕುತ್ತಿಗೆಯನ್ನು ಬಿಗಿಯಿದು ಭೀಕರವಾಗಿ ಕೊಲೆಗೈದಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ನಡೆದಿದೆ.
ಲೋಕಸಭಾ ಚುನಾವಣೆ 2024 : ನಮ್ಮ ಕುಟುಂಬದವರು ಯಾರು ಸ್ಪರ್ಧೆ ಮಾಡುವುದಿಲ್ಲ : ಸಚಿವ ಸತೀಶ್ ಜಾರಕಿಹೊಳಿ
ಮಾಲಾಶ್ರೀ ಕೊಲೆಗಿಡಾಗಿರುವ ಮಹಿಳೆ ಎಂದು ಹೇಳಲಾಗುತ್ತಿದೆ. ಕಳೆದ ಎಂಟು ವರ್ಷಗಳ ಹಿಂದೆ ತಿಂಥಣಿ ಗ್ರಾಮದ ಹಣಮಂತನಿಗೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನವರಾದ ಅಯ್ಯಪ್ಪ ಕಲ್ಲಪ್ಪ ಅವರು ತಮ್ಮ ಕಿರಿಯ ಮಗಳನ್ನು ವಿವಾಹ ಮಾಡಿಕೊಟ್ಟಿದ್ದರು. ಇವರಿಗೆ ಮೂವರು ಮಕ್ಕಳಿದ್ದಾರೆ. ಪರ ಪುರುಷನೊಂದಿಗೆ ಪತ್ನಿ ಅನೈತಿಕ ಸಂಬಂಧವಿದೆ ಎಂದು ಪತಿ ಹನುಮಂತ ಪತ್ನಿಗೆ ಮಾಲಾಶ್ರೀಗೆ ಕಿರುಕುಳ ನೀಡುತ್ತಿದ್ದನು.
ವಿಶ್ವದ ಅತಿದೊಡ್ಡ ‘ಧಾನ್ಯ ಸಂಗ್ರಹ ಯೋಜನೆ’ ಸ್ಥಾಪಿಸುವ ಯೋಜನೆಯನ್ನು ಘೋಷಿಸಿದ ಪ್ರಧಾನಿ ಮೋದಿ
ಈ ವಿಚಾರವಾಗಿ ಹಿರಿಯ ಸಮ್ಮುಖದಲ್ಲಿ ರಾಜಿ-ಪಂಚಾಯಿತಿಗಳು ನಡೆದಿದ್ದವು. ಹನುಮಂತನ ವಿರುದ್ಧ ಸೂಕ್ತ ಕ್ರಮ ಕೊಳ್ಳಬೇಕು ಎಂದು ಮೃತಳ ತಂದೆ ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ನೀರು ನೀಡಿದ್ದಾರೆ. ಮಹಿಳೆ ಕೊಲೆಯಾದ ಸ್ಥಳಕ್ಕೆ ಪಿಎಸ್‌ಐ ಆನಂದ ವಾಗ್ಮೋಡೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ. ಸುರಪುರ ತಾಲೂಕಿನ ತಿಂಥಣಿಯಲ್ಲಿ ಮಹಿಳೆ ಕೊಲೆಯಾದ ಸ್ಥಳಕ್ಕೆ ಪಿಎಸ್‌ಐ ಆನಂದ ವಾಗ್ಮೋಡೆ ಭೇಟಿ ನೀಡಿ ಪರಿಶೀಲಿಸಿದರು.
ತುರ್ತು ನಿರ್ವಹಣಾ ಕಾರ್ಯ : ಫೆ.27-28 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ನೀರು ಪೂರೈಕೆ ಸಂಪೂರ್ಣ ಸ್ಥಗಿತ