ಬೆಂಗಳೂರು : ಟರ್ಕಿಯಲ್ಲಿ ಕಾಂಗ್ರೆಸ್ ಕಚೇರಿ ಸಂಬಂಧ ತಪ್ಪು ಮಾಹಿತಿ ನೀಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದೀಗ ಅಮಿತ್ ಮಾಳವಿಯ ವಿರುದ್ಧದ FIR ಗೆ ಹೈ ಕೋರ್ಟ್ ತಡೆ ನೀಡಿದೆ.ಮಧ್ಯಂತರ ತಡೆ ನೀಡಿ ನ್ಯಾಯಾಧೀಶರಾದ ಎಸ್ ರಾಚಯ್ಯ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ FIR ದಾಖಲಾಗಿತ್ತು. ಟರ್ಕಿಯಲ್ಲಿ ಕಾಂಗ್ರೆಸ್ ಕಚೇರಿ ಸಂಬಂಧ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ FIR ದಾಖಲಿಸಲಾಗಿತ್ತು. ಇಂದು ವಿಚಾರಣೆ ವೇಳೆ ಪೊಲೀಸರು FIR ತಿದ್ದುಪಡಿ ಮಾಡಿದ್ದಾರೆ. ಸೆಕ್ಷನ್ ತಿದ್ದುಪಡಿ ಮಾಡಿ ಜಾಮೀನು ರಹಿತ ಕೇಸ್ ಹಾಕಿದ್ದಾರೆ. ಹಾಕಿರುವ ಸೆಕ್ಷನ್ ಗಳು ಅನ್ವಯವಾಗುವುದಿಲ್ಲವೆಂದು ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅರುಣ್ ಶಾಮ್ ವಾದ ಮಂಡಿಸಿದರು. ಬಳಿಕ ಅಮಿತ್ ಮಾಳವಿಯ ವಿರುದ್ಧದ ಪ್ರಕರಣಕ್ಕೆ ಇದೀಗ ಹೈಕೋರ್ಟ್ ತಡೆ ನೀಡಿದೆ.