ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗುರುವಾರ ಮಹಿಳಾ ಪ್ರೀಮಿಯರ್ ಲೀಗ್ (WPL) 2025ರ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ವಿಶ್ವದ ಪ್ರಮುಖ ಮಹಿಳಾ ಟಿ20 ಲೀಗ್’ನ ಮೂರನೇ ಆವೃತ್ತಿಯು ಬರೋಡಾ, ಬೆಂಗಳೂರು, ಲಕ್ನೋ ಮತ್ತು ಮುಂಬೈ ಎಂಬ ನಾಲ್ಕು ನಗರಗಳಲ್ಲಿ ನಡೆಯಲಿದೆ.
ಬರೋಡಾದಲ್ಲಿ ಹೊಸದಾಗಿ ನಿರ್ಮಿಸಲಾದ ಬಿಸಿಎ ಕ್ರೀಡಾಂಗಣದಲ್ಲಿ ಫೆಬ್ರವರಿ 14 ರಂದು ಪಂದ್ಯಾವಳಿ ಪ್ರಾರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ (ಜಿಜಿ) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸೆಣಸಲಿದೆ. ಫೆಬ್ರವರಿ 21ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಡಬ್ಲ್ಯುಪಿಎಲ್ ಆವೃತ್ತಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ವಿರುದ್ಧ ಆರ್ಸಿಬಿ ತನ್ನ ಮೊದಲ ತವರು ಪಂದ್ಯವನ್ನ ಆಡಲಿದೆ.
BREAKING : ದೆಹಲಿಯಿಂದ ‘ವೈಷ್ಣೋದೇವಿ ಕತ್ರಾ’ಗೆ ವಂದೇ ಭಾರತ್ ಎಕ್ಸ್ಪ್ರೆಸ್ ’50 ದಿನಗಳ ಕಾಲ’ ರದ್ದು
BREAKING : ದೆಹಲಿಯಿಂದ ‘ವೈಷ್ಣೋದೇವಿ ಕತ್ರಾ’ಗೆ ವಂದೇ ಭಾರತ್ ಎಕ್ಸ್ಪ್ರೆಸ್ ’50 ದಿನಗಳ ಕಾಲ’ ರದ್ದು