ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಭಾರತೀಯ ಮಹಿಳಾ ಕ್ರಿಕೆಟ್ ತಂಡವು 2024ರ ಏಷ್ಯಾ ಕಪ್ ಟಿ20 ಫೈನಲ್’ಗೆ ಪ್ರವೇಶಿಸಿದೆ. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಟೀಂ ಇಂಡಿಯಾ ಬಾಂಗ್ಲಾದೇಶವನ್ನ 10 ವಿಕೆಟ್’ಗಳಿಂದ ಸೋಲಿಸಿತು. ಟೀಂ ಇಂಡಿಯಾ ಮೊದಲು ಬೌಲಿಂಗ್’ನಲ್ಲಿ ಮತ್ತು ನಂತರ ಬ್ಯಾಟಿಂಗ್’ನಲ್ಲಿ ಪ್ರಭಲ್ಯ ತೋರಿತು. ಸ್ಮೃತಿ ಮಂಧಾನ ಅಜೇಯ ಅರ್ಧ ಶತಕ ಬಾರಿಸಿದರು. ರೇಣುಕಾ ಸಿಂಗ್ ಮತ್ತು ರಾಧಾ ಯಾದವ್ ತಲಾ 3 ವಿಕೆಟ್ ಪಡೆದರು.
ಅಂದ್ಹಾಗೆ, ಟೀಂ ಇಂಡಿಯಾ 7 ಬಾರಿ ಈ ಪ್ರಶಸ್ತಿ ಗೆದ್ದಿದೆ.
One step closer 👌👌
A superb all-round performance and a comprehensive 10-wicket win for #TeamIndia👏
Scorecard ▶️ https://t.co/JwoMEaSoyn#INDvBAN | #WomensAsiaCup2024 | #ACC | #SemiFinal pic.twitter.com/iaWz32Wi4f
— BCCI Women (@BCCIWomen) July 26, 2024
ಬಾಂಗ್ಲಾದೇಶ ನೀಡಿದ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಕೇವಲ 11 ಓವರ್ಗಳಲ್ಲಿ ಗುರಿ ತಲುಪಿತು. ಮಂಧಾನ ಮತ್ತು ಶಫಾಲಿ ವರ್ಮಾ ಓಪನರ್ ಆಗಿ ಬಂದರು. ಮಂಧನಾ 39 ಎಸೆತಗಳನ್ನು ಎದುರಿಸಿ, 9 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ ಅಜೇಯ 55 ರನ್ ಗಳಿಸಿದರು. ಶೆಫಾಲಿ 28 ಎಸೆತಗಳನ್ನ ಎದುರಿಸಿ 2 ಬೌಂಡರಿ ಬಾರಿಸಿದ್ದು, 26 ರನ್ ಗಳಿಸಿದರು.
ಅಂದ್ಹಾಗೆ, ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕಿ ನಿಗ್ರಾ ಸುಲ್ತಾನ್ 32 ರನ್ ಗಳಿಸಿದರು. ಶೋರ್ನಾ ಅಖ್ತರ್ ಅಜೇಯ 19 ರನ್ ಗಳಿಸಿದರು. ಈ ವೇಳೆ ಟೀಮ್ ಇಂಡಿಯಾ ಪರವಾಗಿ ರೇಣುಕಾ ಮತ್ತು ರಾಧಾ ಮಾರಕ ಬೌಲಿಂಗ್ ಮಾಡಿದರು. ಇನ್ನು ಭಾರತದ ಪರ ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರಾಕರ್ ತಲಾ 1 ವಿಕೆಟ್ ಪಡೆದರು.
BREAKING : ರಾಮನಗರಕ್ಕೆ ʻಬೆಂಗಳೂರು ದಕ್ಷಿಣ ಜಿಲ್ಲೆʼ ಎಂದು ಹೆಸರಿಡಲು ಸಚಿವ ಸಂಪುಟ ಅನುಮೋದನೆ
ವಾಹನ ಸವಾರರೇ ಗಮನಿಸಿ : ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಿ
ಬೆಂಗಳೂರಿಗರೇ ಗಮನಿಸಿ : ಜುಲೈ 30 ರಂದು ನಗರದ ಈ ಏರಿಯಾಗಳಲ್ಲಿ ʻವಿದ್ಯುತ್ ವ್ಯತ್ಯಯʼ | Power Cut