ಬೆಂಗಳೂರು : ಅನುಮಾನಾಸ್ಪದವಾಗಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ ಘಟನೆ ನಡೆದಿದೆ. ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಮೃತ ಮಹಿಳೆ ರಂಜಿತಾ ಪೋಷಕರು ಆರೋಪಿಸುತ್ತಿದ್ದಾರೆ.
ತುಮಕೂರು ಜಿಲ್ಲೆ ತುರುವೇಕೆರೆ ಮೂಲದ ಮಧು ಜೊತೆ ರಂಜಿತಾ, ಮದುವೆ ಆಗಿತ್ತು.ವೃತ್ತಿಯಲ್ಲಿ ರಂಜಿತಾ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದಳು ಹಾಗೂ ಖಾಸಗಿ ಕಂಪನಿ ಒಂದರಲ್ಲಿ ಮಧು ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಮದುವೆ ಆದಾಗಿನಿಂದಲೂ ಪತಿ ವರದಕ್ಷಿಣೆ ಕಿರುಕುಳ ನೀಡುತಿದ್ದ ಆರೋಪ ಕೇಳಿಬಂದಿದೆ.
ಮದುವೆಯಾದಾಗ ನಿಂದಲೂ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ. ವರದಕ್ಷಿಣೆ ನೀಡಿಲ್ಲ ಎಂದು ಮಗಳನ್ನು ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ವರದಕ್ಷಿಣೆ ಕಿರುಕುಳ ಕುರಿತು ರಂಜಿತ ಆಗಾಗ ಹೇಳುತ್ತಿದ್ದಳು ಎಂದು ಹೇಳಲಾಗುತ್ತಿದೆ.ಸಾವಿಗೂ ಮುನ್ನ ತಾಯಿಗೆ ವಿಡಿಯೋ ಕಾಲ್ ಮಾಡಿದ್ದಳು. ಅದಾದ ಬಳಿಕ ರಂಜಿತ ಆತ್ಮಹತ್ಯೆ ಮಾಡಿಕೊಡಿ ಕೊಂಡಿದ್ದಾಳೆ ಎಂದು ರಂಜಿತಾ ಪೋಷಕರಿಗೆ ಅಳಿಯ ಮಧು ಕರೆ ಮಾಡಿದ್ದ ಸ್ಥಳಕ್ಕೆ ಜ್ಞಾನಭಾರತಿ ನಗರ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.