ಬೆಂಗಳೂರು : ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯಲ್ಲಿ ಮಹಿಳಾ ಸಿಬ್ಬಂದಿಗಳ ಮೇಲೆ ಬಿಬಿಎಂಪಿ ಆಸ್ತಿ ವಿಭಾಗದ ಅಧಿಕಾರಿ ಒಬ್ಬ ಲೈಂಗಿಕ ದೌರ್ಜನ್ ಎಸಯಾಗಿದ್ದು ತನ್ನ ಕೊಠಡಿಗೆ ಕರೆಸಿ ಬಾಯಿಗೆ ಬಂದ ಹಾಗೆ ಅವಾಚ್ಯಪದಗಳಿಂದ ನಿಂದಿಸಿರುವ ಆರೋಪ ಇದೀಗ ಮಹಿಳಾ ಸಿಬ್ಬಂದಿಗಳು ಆರೋಪಿಸುತ್ತಿದ್ದಾರೆ.
ಹೌದು ಬಿಬಿಎಂಪಿ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗೆ ದೌರ್ಜನ್ಯ ಮಹಿಳಾ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬರುತ್ತಿದೆ. ರಜೆ ಹಾಕಿದರೆ ಎಚ್ಐವಿ ಬಂದಿದ್ಯ? ಅಂತ ಕೇಳುತ್ತಾನೆ. ನಿನ್ನನ್ನು ಯಾರಾದ್ರೂ ರೇಪ್ ಮಾಡಿ ಬಿಸಾಕಿದ್ರಾ? ಎಂದು ಮಹಿಳಾ ಸಿಬ್ಬಂದಿಗಿ ಕೆಟ್ಟ ಪದಗಳಿಂದ ನಿಂದಿಸುತ್ತಾನೆ. ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಪದಗಳಿಂದ ದೌರ್ಜನ ನಡೆಸುತ್ತಿದ್ದಾನಂತೆ.
BBMP ಯ ಆಸ್ತಿ ವಿಭಾಗದ ಸಹಾಯಕ ಆಯುಕ್ತ ಶ್ರೀನಿವಾಸ್ ಮೂರ್ತಿ ಅಧಿಕಾರಿಂದ ಈ ಒಂದು ಕೃತ್ಯ ನಡೆದಿದ್ದು, ಆತನ ವಿರುದ್ಧ ಗಂಭೀರ ಆರೋಪ ಕೇಳಿ ಬರುತ್ತಿದೆ. ಐದು ದಿನ ರಜೆ ಹಾಕಿದ್ದಲ್ಲ ದಂಧೆ ನಡೆಸ್ತಾ ಇದ್ದೀಯ? ಎಂದು ಕೆಟ್ಟ ಪದಗಳಿಂದ ನಿಂದಿಸುವ ಅಧಿಕಾರಿಯಿಂದ ಸಿಬ್ಬಂದಿಗಳು ಬೇಸತ್ತು ಹೋಗಿದ್ದಾರೆ.ನೌಕರರ ಸಂಘಟನೆಯಿಂದ ಎಚ್ಚರಿಕೆ ನೀಡಿದರು ಅಧಿಕಾರಿ ಕೆಟ್ಟ ಪದಗಳಿಂದ ನಿಂದಿಸುತ್ತಿರುವುದು ನಿಲ್ಲಿಸಿಲ್ಲವಂತೆ.
ಶ್ರೀನಿವಾಸ ಮೂರ್ತಿ ಕಿರುಕುಳಕ್ಕೆ ಬೇಸತ್ತು ಮಹಿಳಾ ಸಿಬ್ಬಂದಿ ದೂರು ನೀಡಿದ್ದಾರೆ. ಕಚೇರಿಯ ಕೊಠಡಿಗೆ ಕರೆಸಿ ಲೈಂಗಿಕವಾಗಿ ನಿಂದಿಸಿರುವ ಆರೋಪ ಕೇಳಿ ಬಂದಿದೆ ಮಹಿಳಾ ಸಿಬ್ಬಂದಿಗೆ ಲೈಂಗಿಕವಾಗಿ ನಿಂದಿಸಿರುವ ಆರೋಪ ಕೇಳಿ ಬಂದಿದೆ ದೂರು ಕೊಟ್ಟರೆ ರೀಮಾರ್ಕ್ ಬರೀತೀನಿ ಎಂದು ಬೆದರಿಕೆ ಬೇರೆ ಹಾಕಿದನಂತೆ.
ಸೇವಾ ಪುಸ್ತಕದಲ್ಲಿ ರಿಮಾರ್ಕ್ ಬರಿತೀನಿ ಅಂತಾನಂತೆ ಈ ಅಧಿಕಾರಿ ನಿತ್ಯ ಮಹಿಳಾ ಸಿಬ್ಬಂದಿಯನ್ನು 10 ಬಾರಿ ತನ್ನ ಕೊಠಡಿಗೆ ಕರೆಯಿಸಿ ಅವಾಚ್ಯ ಪದಗಳಿಂದ ನಿಂದಿಸುತ್ತಾನಂತೆ ಸಿಬ್ಬಂದಿ ವಿರುದ್ಧವೇ ಇಲ್ಲ ಸಲ್ಲದ ದೂರು ನೀಡುತ್ತಾನಂತೆ ಹೀಗಾಗಿ ಶ್ರೀನಿವಾಸ ಮೂರ್ತಿ ವಿರುದ್ಧ ಸಿಬ್ಬಂದಿಗಳು ಬಿಬಿಎಂಪಿ ವಿಶೇಷ ಆಯುಕ್ತರಿಗೆ ಮಹಿಳಾ ಸಿಬ್ಬಂದಿಗಳು ದೂರು ನೀಡಿದ್ದಾರೆ.