ಹಾಸನ : ಹಾಸನದಲ್ಲಿ ಪ್ರಿಯತಮೆ ಇಂದಲೇ ಪ್ರಿಯಕರನಿಗೆ ಚಾಕು ಇರಿದ ಘಟನೆ ನಡೆದಿದ್ದು, ಚಾಕು ಇರಿತಕ್ಕೆ ಒಳಗಾದಂತಹ ಪ್ರಿಯಕರ ಮನು ಕುಮಾರ್ ಸ್ಥಿತಿ ಇದೀಗ ಗಂಭೀರವಾಗಿದೆ. ಹಾಸನ ನಗರದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ರಾತ್ರಿ 12.30ಕ್ಕೆ ಈ ಘಟನೆ ನಡೆದಿದೆ. ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರಿಗೆ ಆತನ ಪ್ರಿಯತಮೆ ಚಾಕು ಇರಿದಿದ್ದಾಳೆ. ಸದ್ಯ ಪ್ರಿಯತಮೆ ವಿರುದ್ಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಖಾಸಗಿ ಹೋಟೆಲ್ ನಲ್ಲಿ ಈ ಒಂದು ಘಟನೆ ನಡೆದಿದೆ. ಪ್ರಿಯತಮೆ ಹಾಗೂ ಮನೋ ಕುಮಾರ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೆಲವು ದಿನಗಳಿಂದ ಅವರು ವೈಮನಸ್ಸಿಂದ ದೂರವಾಗಿದ್ದರು. ನಿನ್ನೆ ಹೊಸ ವರ್ಷಾಚರಣೆ ಪಾರ್ಟಿ ಮುಗಿದ ಸಂದರ್ಭದಲ್ಲಿ ಮನುಕುಮಾರ್ ಮನೆಗೆ ತೆರಳುತ್ತಿದ್ದ ವೇಳೆ ಯುವತಿ ಮನುಕುಮಾರಿಗೆ ಚಾಕು ಇರಿದಿದ್ದಾಳೆ.
ತಡರಾತ್ರಿ 12:30 ಗಂಟೆಗೆ ಯುವತಿ ಖಾಸಗಿ ಹೋಟೆಲಿಗೆ ಬಂದಿದ್ದಾಳೆ. ಈ ವೇಳೆ ಅಲ್ಲಿಗೆ ಬಿದ್ದಿದ್ದ ಪಾಸ್ ತೆಗೆದುಕೊಂಡು ಹೋಟೆಲ್ ಒಳಗೆ ತೆರಳುತ್ತಿದ್ದ ವೇಳೆ ಎದುರಿಗೆ ಆಕೆಯ ಪ್ರಿಯತಮ ಮನುಕುಮಾರ್ ಭೇಟಿಯಾಗಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗಿದೆ.ಅಲ್ಲಿದ್ದ ಕೆಲವರು ಗಲಾಟೆ ಬಿಡಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಪ್ರಿಯತಮೆ ಮನುಕುಮಾರಿಗೆ ಚಾಕು ಇರಿದಿದ್ದಾಳೆ. ಸದ್ಯ ಮನುಕುಮಾರ್ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.