ಬೆಂಗಳೂರು : ಬೆಂಗಳೂರಲ್ಲಿ ಟಿಪ್ಪರ್ ಇಂದು ಬೆಳ್ಳಂ ಬೆಳಿಗ್ಗೆ ಭೀಕರವಾದ ಅಪಘಾತ ಸಂಭಾವಿಸಿದ್ದು, ಟಿಪ್ಪರ್ ಡಿಕ್ಕಿಯಾಗಿ ಪೌರಕಾರ್ಮಿಕ ಮಹಿಳೆ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಶಿವನಗರ ಫ್ಲೈ ಓವರ್ ಬಳಿ ಈ ಒಂದು ದುರಂತ ನಡೆದಿದೆ.
ಮೃತ BBMP ಪೌರ ಕಾರ್ಮಿಕ ಮಹಿಳೆಯನ್ನು ಸರೋಜಾ ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ಶವ ರವಾನಿಸಲಾಗಿದೆ. ವಿಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.