ಬೆಳಗಾವಿ : ತನ್ನ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಾನೆ ಎಂದು ಪ್ರಿಯಕರನ ಜೊತೆ ಸೇರಿ ಪತಿಯನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸವದತ್ತಿ ಎಂಬ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಬಸ್ತವಾಡ ಗ್ರಾಮದ ನಿವಾಸಿ ಮಹೇಂದ್ರ ಓಲೆಕಾರ್ (45) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬಾವನಸೌದತ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪತ್ನಿ ಸಿದ್ದವ್ವ ಮತ್ತು ಗಣಪತಿ ಕಾಂಬಳೆಯನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಜನವರಿ 5ರಂದು ಸೌಗಂಧದೇವಿ ದರ್ಶನಕ್ಕೆ ಪತ್ನಿ ಪತಿಯನ್ನು ಕರೆದುಕೊಂಡು ಹೋಗಿದ್ದಾಳೆ.ಈ ವೇಳೆ ಕೃಷ್ಣಾ ನದಿ ದಂಡೆಯ ಮೇಲೆ ಸ್ನಾನ ಮಾಡುವಾಗ ಪತಿಯನ್ನು ಹತ್ಯೆಗಯ್ಯಲಾಗಿದೆ. ಕಲ್ಲಿನಿಂದ ಜಜ್ಜಿ ಪತ್ನಿ ಸಿದ್ದವ್ವ ಹಾಗೂ ಗಣಪತಿಯಿಂದ ಕೊಲೆ ಮಾಡಲಾಗಿದೆ. ಬಳಿಕ ಶವವನ್ನು ಕೃಷ್ಣಾ ನದಿಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಕೊಲೆ ಕೇಸ್ ದಾಖಲಿಸಿದ್ದ ರಾಯಭಾಗ ಪೊಲೀಸರು ತನಿಖೆ ಬೆಳೆ ಹೆಂಡತಿ ಮತ್ತು ಪ್ರಿಯಕರ ಕೊಲೆ ಮಾಡಿದ್ದು ಬಹಿರಂಗವಾಗಿದೆ.