ಬೆಂಗಳೂರು : ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಆಪ್ ನಲ್ಲಿ ಆಟೋ ಬುಕ್ ಮಾಡಿದ್ದ ವೇಳೆ ಕುಡಿದ ನಶೆಯಲ್ಲಿ ನಿಗದಿತ ಸ್ಥಳಕ್ಕೆ ತೆರಳದೆ ಆಟೋ ಚಾಲಕ ಬೇರೆ ಸ್ಥಳಕ್ಕೆ ತೆರಳಿದ್ದ ಸಂದರ್ಭ ಭಯ ಭೀತಾರಾದಂತಹ ಮಹಿಳೆ ಆಟೋದಿಂದ ಜಿಗಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆಟೋ ಚಾಲಕನನ್ನು ಬಂಧಿಸಿದ್ದಾರೆ.
ಹೌದು. ಬೆಂಗಳೂರಲ್ಲಿ ಮಹಿಳೆಯ ಜೊತೆಗೆ ಆಟೋ ಚಾಲಕ ಕಿರಿಕ್ ಮಾಡಿಕೊಂಡಿದ್ದು, ಆಟೋ ಚಾಲಕನ ಕಿರುಕುಳಕ್ಕೆ ಮಹಿಳೆ ಭಯ ಭೀತಾರಾಗಿದ್ದಾರೆ. ನಮ್ಮ ಯಾತ್ರೆ ಆಪ್ ನಲ್ಲಿ ಆಟೋವನ್ನು ಮಹಿಳೆ ಬುಕ್ ಮಾಡಿದ್ದಾರೆ. ನಿಗದಿದ್ದ ಸ್ಥಳಕ್ಕೆ ಹೋಗದೆ ಆಟೋ ಚಾಲಕ ಬೇರೆ ಕಡೆ ಹೋಗಿದ್ದಾನೆ. ಕುಡಿದ ನಶೆಯಲ್ಲಿ ಮಹಿಳೆಯ ಜೊತೆ ಕಿರಿಕ್ ಮಾಡಿದ್ದಾನೆ. ಈ ವೇಳೆ ಗಾಡಿ ನಿಲ್ಲಿಸಲ್ಲ ಜಿಗಿದು ಹೋಗು ಎಂದು ಚಾಲಕ ಹೇಳಿದಾಗ, ಅನಿವಾರ್ಯವಾಗಿ ಮಹಿಳೆ ಚಲಿಸುತ್ತಿದ್ದ ಆಟೋದಿಂದ ಜಿಗಿದಿದ್ದಾಳೆ.
ಹೊರಮಾವಿನಿಂದ ಥಣಿಸಂದ್ರಕ್ಕೆ ಮಹಿಳೆ ಆಟೋ ಬುಕ್ ಮಾಡಿದ್ದರು. ಆದರೆ ಚಾಲಕ ಹೆಬ್ಬಾಳದತ್ತ ಆಟೋ ತಿರುಗಿಸಿದ್ದಾನೆ ಎಂದು ಮಹಿಳೆಯ ಆರೋಪಿಸಿದ್ದರು.ಇದೀಗ ಆಟೋ ಚಾಲಕನನ್ನು ಅಮೃತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.