ಬೆಂಗಳೂರು : ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಮಿತಿ ಮೀರಿದ ಜನದಟ್ಟಣೆ, ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ಮಧ್ಯ ಮೆಟ್ರೋ ಟ್ರೈನ್ ನಲ್ಲಿ ಎಲ್ಲಿಯೂ ಸಹ ನಿಂತುಕೊಳ್ಳುವುದಕ್ಕೂ ಜಾಗವಿಲ್ಲದಷ್ಟು ಜನಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಮೆಟ್ರೋ ಟ್ರೈನಿನಲ್ಲಿ ಯುವತಿ ಒಬ್ಬಳು ತಲೆ ತಿರುಗಿ ಬಿದ್ದಿರುವ ಘಟನೆ ನಡೆದಿದೆ.
ಹೌದು ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ನೇರಳೆ ಮಾರ್ಗದಲ್ಲಿ ವೈಟ್‌ಫೀಲ್ಡ್-ಕೆಂಪೇಗೌಡ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣಕ್ಕೆ ತೆರಳುತ್ತಿದ್ದ ಮೆಟ್ರೋ ರೈಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸಿದ್ದು, ಈ ವೇಳೆ ಯುವತಿಯೊರ್ವಳು ತಲೆ ತಿರುಗಿ ಬಿದ್ದಿದ್ದಾರೆ.ಕೂಡಲೇ ಸಹ ಪ್ರಯಾಣಿಕರು ಅವರನ್ನು ರಕ್ಷಣೆ ಮಾಡಿ, ನೀರು ಕೊಟ್ಟಿದ್ದಾರೆ.
ನಿನ್ನೆ ಸಂಜೆ ಆರು ಗಂಟೆಗೆ ಕೆ ಆರ್ ಪುರದಲ್ಲಿ ಯುವತಿ ಮೆಟ್ರೋ ಟ್ರೈನ್ ಹತ್ತಿದ್ದಾಳೆ. ಈ ವೇಳೆ ಟ್ರೈನ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಕೂಡಲೇ ಯುವತಿಗೆ ನಿಂತಲ್ಲಿ ಕುಸಿದು ಬೀಳಲು ಆರಂಭಿಸಿದ್ದಾಳೆ ತಕ್ಷಣ ಸಹ ಪ್ರಯಾಣಿಕರರು ಆಕೆಯನ್ನು ಆಸನದಲ್ಲಿ ಕೂರಿಸಿ ಸ್ವಲ್ಪ ನೀರು ಕೊಟ್ಟು ಉಪಚರಿಸಿದ್ದಾರೆ.
ಅಷ್ಟರಲ್ಲಿ ರೈಲು ಸ್ವಾಮಿ ವಿವೇಕಾನಂದ ರಸ್ತೆಯ ಮೆಟ್ರೋ ನಿಲ್ದಾಣ ತಲುಪಿತು. ನಿಲ್ದಾಣದಲ್ಲಿದ್ದ ಸಿಬ್ಬಂದಿಗೆ ಸಹಾಯಕ್ಕಾಗಿ ಕೂಗಲಾಯಿತು. ಆದರೆ, ಆ ವ್ಯಕ್ತಿ ಪ್ರತಿಕ್ರಿಯಿಸಲಿಲ್ಲ. ನಂತರ ರೈಲು ಮುಂದೆ ಚಲಿಸಿ, ಬಳಿಕ ತನ್ನ ಜೊತೆಗೆ ಬಂದಿದ್ದ ವ್ಯಕ್ತಿಯೊಂದಿಗೆ ಯುವತಿ ಹಲಸೂರು ಮೆಟ್ರೋ ನಿಲ್ದಾಣದಲ್ಲಿ ಇಳಿದು ಹೋದರು.