ವಿಜಯಪುರ : ವಿಜಯಪುರ ನಗರದ ನವಭಾಗ್ ರಸ್ತೆಯಲ್ಲಿ ಬೃಹತ್ ಫಿಶ್ ಟನಲ್ ಎಕ್ಸ್ಪೋ ಹಮ್ಮಿಕೊಂಡಿದ್ದು, ಈ ಒಂದು ಮನೋರಂಜನ ಆಟಗಳಲ್ಲಿ ಯುವತಿಯೊಬ್ಬಳು ರೇಂಜರ್ ಸ್ವಿಂಗ್ ನಲ್ಲಿ ಕುಳಿತಿದ್ದಾಗ ಬೆಲ್ಟ್ ಕಟ್ ಆಗಿ ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಹೌದು ಮೃತ ಯುತಿಯನ್ನು ನಿಕಿತಾ ಎಂದು ಗುರುತಿಸಲಾಗಿದ್ದು, ಅಕ್ಟೋಬರ್ 20ರಂದು ಈ ಒಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಒಂದು ರೇಂಜರ್ ಸ್ವಿಂಗ್ ನಲ್ಲಿ ಮೂವರು ಯುವತಿಯರು ಒಟ್ಟಿಗೆ ಕುಳಿತಿದ್ದು, ಅದರಲ್ಲಿ ನಿಖಿತಾಳ ಸೊಂಟಕ್ಕೆ ಕಟ್ಟಿದ್ದ ಬೆಲ್ಟ್ ಕಟ್ಟಾಗಿ ಕೆಳಗೆ ಬಿದ್ದಿದ್ದಾಳೆ.
ತಲೆ ಕೆಳಗಾಗಿ ಬಿದ್ದ ಪರಿಣಾಮ ನಿಖಿತಾ ತ್ರೀವವಾಗಿ ಗಾಯಗೊಂಡಿದ್ದರು. ತಕ್ಷಣ ನಿಖಿತಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಯುವತಿ ಮೃತಪಟ್ಟಿದ್ದಾಳೆ. ಘಟನೆ ಕುರಿತಂತೆ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.